Publish Date: Sun, 23 Apr 2017 (07:12 IST)
Updated Date: Sun, 23 Apr 2017 (07:14 IST)
ಮುಂಬೈ: ಗಳಿಸಿದ್ದು ಕೇವಲ 142. ಆದರೂ ಡೆಲ್ಲಿ ಡೇರ್ ಡೆವಿಲ್ಸ್ ಗೆ ಬೆನ್ನತ್ತಲು ಸಾಧ್ಯವಾಗದಂತೆ ಮಾಡುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಯಿತು. ಇದರಿಂಗಾಗಿ 14 ರನ್ ಗಳ ಗೆಲುವು ದಾಖಲಿಸಿತು.
ಡೆಲ್ಲಿ ಏಳು ವಿಕೆಟ್ ನಷ್ಟಕ್ಕೆ 128 ಕ್ಕೆ ಬಾಲ ಮುದುರಿಕೊಂಡಿತು. ಒಂದು ಹಂತದಲ್ಲಿ ಡೆಲ್ಲಿ ಬ್ಯಾಟ್ಸ್ ಮನ್ ಗಳು ಕೇವಲ 28 ರನ್ ಗಳಿಸಿ ಆರು ವಿಕೆಟ್ ಗಳಿಸಿಕೊಂಡು ಒದ್ದಾಡುತ್ತಿದ್ದರು. ಈ ಹಂತದಲ್ಲಿ ಜತೆಯಾದ ಕಗಿಸೊ ರಬಡಾ (44) ಮತ್ತು ಕ್ರಿಸ್ ಮೋರಿಸ್ (52) ತಂಡಕ್ಕೆ ಚೇತರಿಕೆ ನೀಡಿದರು. ಮುಂಬೈ ಪರ ಮಿಚೆಲ್ ಮೆಕ್ ಕ್ಲೆಂಗಾನ್ 3 ವಿಕೆಟ್ ಹಾಗೂ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತು ದೆಹಲಿ ಬೆನ್ನೆಲುಬು ಮುರಿದರು.
ಇದಕ್ಕೂ ಮೊದಲು ದೆಹಲಿ ಬೌಲಿಂಗ್ ಮನಮೋಹಕವಾಗಿತ್ತು. ನಾಯಕ ಜಹೀರ್ ಖಾನ್ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. ಅಲ್ಲದೆ ಮೂರು ರನೌಟ್ ಗಳು ದೆಹಲಿ ತಂಡದ ಉತ್ತಮ ಫೀಲ್ಡಿಂಗ್ ಗೆ ಸಾಕ್ಷಿ. ಹಾಗಿದ್ದರೂ ದೆಹಲಿ ತಮ್ಮ ನಾಲ್ಕನೇ ಸೋಲು ಕಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ