ಮುಂಬೈ: ಐಪಿಎಲ್ ನ ಮೊದಲ ಆವೃತ್ತಿ ಗೆದ್ದಿದ್ದ ರಾಜಸ್ತಾನ್ ರಾಯಲ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷ ನಿಷೇಧಕ್ಕೊಳಗಾಗಿತ್ತು. ಅಜ್ಞಾತ ವಾಸ ಮುಗಿಸಿ ಮುಂದಿನ ಆವೃತ್ತಿಗೆ ಕಣಕ್ಕೆ ಮರಳುತ್ತಿರುವ ತಂಡ ಮಹತ್ವದ ಬದಲಾವಣೆಯೊಂದನ್ನು ಮಾಡಿಕೊಳ್ಳುತ್ತಿದೆ.
ರಾಜಸ್ತಾನ್ ರಾಯಲ್ಸ್ ತಂಡದ ಮಾಲಿಕರು ತಮ್ಮ ಕಂಪನಿ ಹೆಸರು ಬದಲಾಯಿಸಿಕೊಳ್ಳಲು ಚಿಂತನೆ ನಡೆಸಿದೆ. ಅದರ ಬಗ್ಗೆ ಬಿಸಿಸಿಐಗೆ ಮನವಿಯನ್ನೂ ಮಾಡಿದೆ. ಆದರೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
ಜೈಪುರ್ ಐಪಿಎಲ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಾಲಿಕತ್ವದ ರಾಜಸ್ಥಾನ್ ತನ್ನ ಸಂಸ್ಥೆಯ ಹೆಸರು ಬದಲಾವಣೆ ಮಾಡಲು ಮನವಿ ಮಾಡಿದೆ. ಅಲ್ಲದೆ, ಮೊಹಾಲಿಯಿಂದ ತನ್ನ ಕೇಂದ್ರವನ್ನು ಜೈಪುರಕ್ಕೆ ಸ್ಥಳಾಂತರಿಸಲೂ ಚಿಂತನೆ ನಡೆಸಿದೆಯಂತೆ. ಸದ್ಯದಲ್ಲೇ ಈ ಬಗ್ಗೆ ಘೋಷಣೆ ಹೊರಬೀಳಬಹುದು.