ಮುಂಬೈ: ಕ್ರಿಕೆಟಿಗರು ಗಾಯದ ಸಮಸ್ಯೆಯಿಂದಲೋ, ಇನ್ನೇನೋ ವೈಯಕ್ತಿಕ ಸಮಸ್ಯೆಯಿಂದಲೋ ಪಂದ್ಯ ತಪ್ಪಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಗುಜರಾತ್ ಲಯನ್ಸ್ ತಂಡದ ಆಟಗಾರ ಏರಾನ್ ಪಿಂಚ್ ಕ್ರಿಕೆಟ್ ಕಿಟ್ ಕಳೆದುಕೊಂಡ ಕಾರಣಕ್ಕೆ ಪಂದ್ಯ ತಪ್ಪಿಸಿಕೊಂಡಿದ್ದಾರೆ.
ಈ ಬಗ್ಗೆ ಸ್ವತಃ ನಾಯಕ ರೈನಾ ಮಾಹಿತಿ ನೀಡಿದ್ದಾರೆ. ಕೋಲ್ಕೊತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಪಿಂಚ್ ಆಡಿರಲಿಲ್ಲ. ಯಾಕೆ ಆಡುತ್ತಿಲ್ಲ ಎಂದಿದ್ದಕ್ಕೆ ರೈನಾ ಈ ಕಾರಣ ಕೊಟ್ಟಿದ್ದಾರೆ. ‘ದುರದೃಷ್ಟವಶಾತ್ ಅವರು ಅವರ ಕ್ರಿಕೆಟ್ ಕಿಟ್ ಕಳೆದುಕೊಂಡರು. ಹೀಗಾಗಿ ಪಂದ್ಯ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ರೈನಾ ಹೇಳಿದ್ದರು.
ಈ ಬಗ್ಗೆ ಇದೀಗ ಟ್ವಿಟರ್ ನಲ್ಲಿ ತಮಾಷೆಗಳು ಹರಿದಾಡುತ್ತಿವೆ. ಎಲ್ಲಾ ಸರಿ, ಆಡದೇ ಇರುವುದಕ್ಕೆ ಇದೂ ಒಂದು ಕಾರಣವೇ ಎಂದು ಸಂದೇಶಗಳು ಹರಿದಾಡುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ