Publish Date: Tue, 26 Sep 2017 (09:10 IST)
Updated Date: Tue, 26 Sep 2017 (09:13 IST)
ನವದೆಹಲಿ: ಅಮೆರಿಕಾ ನಮ್ಮ ಮೇಲೆ ಯುದ್ಧ ಸಾರಿದೆ. ಅವರ ಯುದ್ಧ ವಿಮಾನಗಳನ್ನು ಹೊಡೆದುರಳಿಸುತ್ತೇವೆ ಉತ್ತರ ಕೊರಿಯಾ ಮತ್ತೊಮ್ಮೆ ಅಮೆರಿಕಾ ಮೇಲೆ ಗುಡುಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೋಂಗ್ ‘ನಮ್ಮ ಮೇಲೆ ಮೊದಲು ಯುದ್ಧ ಸಾರಿರುವುದು ಅಮೆರಿಕಾ ಎಂದು ಇಡೀ ಜಗತ್ತು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ತಿರುಗೇಟು ನೀಡುವ ಎಲ್ಲಾ ಹಾದಿಗಳನ್ನು ನಾವು ಮುಕ್ತರಾಗಿಸಿದ್ದೇವೆ’ ಎಂದು ಯೋಂಗ್ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಅವರ ಯುದ್ಧ ವಿಮಾನಗಳು ನಮ್ಮ ವಾಯು ಗಡಿಯೊಳಗೇ ಇಲ್ಲದಿದ್ದರೂ ಹೊಡೆದುರಳಿಸಲು ನಾವು ಹಿಂದೆ ಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಂಗ್ ಉನ್ ನಡುವಿನ ವಾಕ್ಸಮರ ತಾರಕ್ಕೇರಿರುವ ಮಧ್ಯದಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಭೀತಿ ಇನ್ನಷ್ಟು ಹೆಚ್ಚಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ