ನವದೆಹಲಿ: ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವತಿಯರನ್ನು ಪ್ರಯಾಣ ಮಾಡದಂತೆ ತಡೆಹಿಡಿಯಲಾಯಿತು. ಅದಕ್ಕೆ ಕಾರಣವೇನು ಗೊತ್ತಾ?!
ಆ ಯುವತಿಯರು ಲೆಗ್ಗಿಂಗ್ಸ್ ಪ್ಯಾಂಟ್ ತೊಟ್ಟಿದ್ದೇ ಇದಕ್ಕೆ ಕಾರಣ. ಇನ್ನೊಬ್ಬ ಯುವತಿ ಬೂದು ಬಣ್ಣದ ಲೆಗ್ಗಿಂಗ್ಸ್ ತೊಟ್ಟಿದ್ದಳು. ಆಕೆ ಡ್ರೆಸ್ ಬದಲಾಯಿಸಲು ಒಪ್ಪಿದ ಮೇಲೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಯುವತಿಯರ ಬಳಿ ಉಡುಪು ಬದಲಾಯಿಸಲು ಒತ್ತಾಯಿಸಿದ್ದನ್ನು ಟೀಕಿಸಿದ ಟ್ವೀಟರಿಗರಿಗೆ ಉತ್ತರಿಸಿದ ಯುನೈಟೆಡ್ ಸಂಸ್ಥೆ ‘ಪ್ರಯಾಣಿಕರು ಸೂಕ್ತ ಉಡುಪು ಧರಿಸಿಲ್ಲದಿದ್ದರೆ, ಅವರ ಪ್ರಯಾಣಕ್ಕೆ ಅನುಮತಿ ನೀಡದೇ ಇರುವ ಹಕ್ಕು ಸಂಸ್ಥೆಗಿದೆ’ ಎಂದು ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ