ಜಗತ್ತಿನಲ್ಲಿ ಎಂಥೆಂಥಾ ವಿಕೃತ ಮನಸ್ಸಿನವರಿರುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಗುಂದ ಗ್ರಾಮದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ನಾಯಿ ಜೊತೆ ಸಂಭೋಗ ಮಾಡಿಸಿ ಅದನ್ನ ನೋಡಿ ವಿಕೃತ ಸಂತೋಷ ಅನುಭವಿಸುತ್ತಿದ್ದ ಆರೋಪ ಕೇಳಿಬಂದಿದೆ. ಪತಿಯ ಈ ಕಾಟ ಸಹಿಸಲಾರದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಪೊಲಿಸರಿಗೆ ನೊಂದ ಮಹಿಳೆ ದೂರು ನೀಡಿದ್ದು, ಆರೋಪಿ ಸಂಜೀವ ಭಾಗೋಜಿಯನ್ನ ಬಂಧಿಸಲಾಗಿದೆ. ಅಸ್ವಸ್ಥ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
2 ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಸಂಜೀವ್ ಬಲವಂತವಾಗಿ ನಾಯಿ ಜೊತೆ ಸಂಭೋಗ ಮಾಡಿಸಿದ್ದ. ಪದೇ ಪದೇ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.