ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸೇನೆ ನಡುವೆ ಆಗಾಗ ತಳ್ಳಾಟ-ನೂಕಾಟದ ಯುದ್ಧ ನಡೆಯುತ್ತದೆ. ಆದರೆ ಮೊನ್ನೆ ನಡೆದ ಗಂಭೀರ ಗುದ್ದಾಟದ ಸಂದರ್ಭದಲ್ಲಿಯೂ ಉಭಯ ಸೇನೆಗಳು ಶಸ್ತ್ರಾಸ್ತ್ರ ಬಳಸಿಲ್ಲ ಯಾಕೆ ಗೊತ್ತಾ?
ಇದಕ್ಕೆ ಕಾರಣ 1996 ಮತ್ತು 2005 ರಲ್ಲಿ ಉಭಯ ದೇಶಗಳ ಸರ್ಕಾರದ ನಡುವೆ ಶಸ್ತ್ರಾಸ್ತ್ರ ಬಳಸದೇ ಇರುವ ಶಾಂತಿ ಒಪ್ಪಂದ ನಡೆದಿದ್ದೇ ಕಾರಣ. ಈ ಕಾರಣಕ್ಕೆ ಇಲ್ಲಿ ಸೇನೆಗಳು ಶಸ್ತ್ರಾಸ್ತ್ರ ಬಳಸಿ ಯುದ್ಧ ಮಾಡುವುದಿಲ್ಲ.
ಬದಲಾಗಿ ಉಭಯ ದೇಶಗಳ ಸೈನಿಕರ ನಡುವೆ ಮುಷ್ಠಿ ಯುದ್ಧ ನಡೆಯುತ್ತದೆ. ಮೊನ್ನೆಯೂ ಇದೇ ರೀತಿ ನಡೆದಿತ್ತು. ದೊಣ್ಣೆ, ಕಲ್ಲೆಸೆದು ಸೈನಿಕರು ಪರಸ್ಪರ ಕಾದಾಡಿಕೊಂಡಿದ್ದರು.