ನವದೆಹಲಿ: ಗ್ಯಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಸೈನಿಕರು ಸಂಘರ್ಷ ನಡೆಸಿ 20 ಯೋಧರ ಸಾವಿಗೆ ಕಾರಣರಾದ ಮೇಲೆ ಚೀನಾ ಮೇಲಿನ ಭಾರತೀಯರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ಕೊರೋನಾ ಮಹಾಮಾರಿಯನ್ನು ಜಗತ್ತಿಗೆ ಹರಡಿದ ಬಳಿಕ ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶೀ ವಸ್ತುಗಳನ್ನು ಬೆಂಬಲಿಸುವ ಬಗ್ಗೆ ಸಣ್ಣದೊಂದು ಕೂಗು ಜನರಲ್ಲಿ ಕೇಳಿಬಂದಿತ್ತು. ಇದೀಗ ಗಡಿಯಲ್ಲಿ ಸಂಘರ್ಷ ತಾರಕಕ್ಕೇರಿದ ಬಳಿಕ ಆ ಕೂಗು ಹೆಚ್ಚಾಗಿದೆ.
ನಮ್ಮ ಸೈನಿಕರ ಮೇಲೆರಗಿದ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಆ ದೇಶಕ್ಕೆ ತಕ್ಕ ಪಾಠ ಕಲಿಸಬೇಕೆಂದು ಸೋಷಿಯಲ್ ಮೀಡಿಯಾ ಮೂಲಕ ಜನರು ಕರೆ ಕೊಡುತ್ತಿದ್ದಾರೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಗಳು ಹೆಚ್ಚಾಗಿವೆ. ನೇರವಾಗಿ ಭಾರತವೇ ಶಸ್ತ್ರಾಸ್ತ್ರ ಪ್ರಯೋಗಿಸುವ ಬದಲು ಆರ್ಥಿಕವಾಗಿ ಆ ದೇಶದ ವಸ್ತುಗಳನ್ನು ಬಹಿಷ್ಕರಿಸಿ ಆದಾಯ ಮೂಲಕ್ಕೆ ಪೆಟ್ಟು ನೀಡಬೇಕು. ಇಂತಹ ಮಾರ್ಗಗಳನ್ನು ಬಳಸಿ ಚೀನಾವನ್ನು ಬಗ್ಗು ಬಡಿಯಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.