Select Your Language

Notifications

webdunia
webdunia
webdunia
webdunia

ಯಾರು ಈ ಮಾಸ್ಟರ್ ಕಾರ್ಡ್ನ ಮಾಜಿ ಸಿಇಒ ಅಜಯ್ ಬಂಗಾ?

ಯಾರು ಈ ಮಾಸ್ಟರ್ ಕಾರ್ಡ್ನ ಮಾಜಿ ಸಿಇಒ ಅಜಯ್ ಬಂಗಾ?
ನವದೆಹಲಿ , ಶುಕ್ರವಾರ, 24 ಫೆಬ್ರವರಿ 2023 (15:36 IST)
ಮಾಸ್ಟರ್ ಕಾರ್ಡ್ನ ಮಾಜಿ ಸಿಇಒ ಅಜಯ್ ಬಂಗಾ ಅವರ ಹೆಸರನ್ನು ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ನಾಮನಿರ್ದೇಶನ ಮಾಡಿದೆ.

ಮಹಾರಾಷ್ಟ್ರದ ಪುಣೆಯಲ್ಲಿ 1959ರ ನವೆಂಬರ್ 10 ರಂದು ಜನಿಸಿದ ಅಜಯ್ ಬಂಗಾ ಅವರ ತಂದೆ ಹರ್ಭಜನ್ ಸಿಂಗ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. 

ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಅಹಮದಾಬಾದ್ನ ಐಐಎಂನಲ್ಲಿ ಎಂಬಿಎ ಓದಿದ್ದಾರೆ. ಶಿಕ್ಷಣದ ಬಳಿಕ ನೆಸ್ಲೆಇಂಡಿಯಾ ಹಾಗೂ ಸಿಟಿಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸಿದ್ದ ಇವರು 1996ರಲ್ಲಿ ಅಮೆರಿಕಕ್ಕೆ ತೆರಳಿ ಪೆಪ್ಸಿಕೋ ಕಂಪನಿಯಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು.

2009ರಲ್ಲಿ ಅಧ್ಯಕ್ಷರಾಗಿ ಮಾಸ್ಟರ್ಕಾರ್ಡ್ ಕಂಪನಿ ಸೇರಿ ಬಳಿಕ ಅದರ ಸಿಇಒ ಆದರು. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ  ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಪ್ರಸ್ತುತ ಜನರಲ್ ಅಟ್ಲಾಂಟಿಕ್ ಕಂಪನಿಯ ಉಪಾಧ್ಯಕ್ಷರಾಗಿರುವ ಅಜಯ್ ಬಂಗಾ ಅವರು ಒಟ್ಟು 30 ವರ್ಷಗಳ ವ್ಯಾಪಾರ ಅನುಭವವನ್ನು ಹೊಂದಿದ್ದಾರೆ. ಬಂಗಾ ಅವರು ಸತತ 12 ವರ್ಷಗಳ ಕಾಲ ಮಾಸ್ಟರ್ ಕಾರ್ಡ್ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿ 2021ನೇ ಡಿಸೆಂಬರ್ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು.

ಸಾಕಷ್ಟು ಪರಿಣತಿಯನ್ನು ಹೊಂದಿರುವ ಬಂಗಾ ಅವರು ಅಮೆರಿಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ