ಬರ್ನ್ : ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವೈರಸ್ ಹರಡದಂತೆ ಕಣ್ಗಾವಲು ಹೆಚ್ಚಿಸುವಂತೆ ರೋಗ ಪೀಡಿತ ದೇಶಗಳಿಗೆ ಮನವಿ ಮಾಡಿದೆ. ರೋಗ ಹರಡುವಿಕೆ ಬಗ್ಗೆ ತನಿಖೆ ನಡೆಯುತ್ತಿದೆ. ಆದರೂ ಒಂದೇ ಸಮಯದಲ್ಲಿ ಏಕಾಏಕಿಯಾಗಿ ಹಲವು ದೇಶಗಳಿಗೆ ವೈರಸ್ ಹರಡುತ್ತಿರುವುದು ಆತಂಕಕಾರಿಯಾಗಿದೆ.
ವೈರಸ್ನ ಹಠಾತ್ತನೆಯ ಗೋಚರಿಸುವಿಕೆ ಹೀಗೆಯೇ ಸ್ವಲ್ಪ ಸಮಯದ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸ್ ತಿಳಿಸಿದ್ದಾರೆ.
ಮೇ 7 ರಂದು ಬ್ರಿಟನ್ನಲ್ಲಿ ಮಂಕಿಪಾಕ್ಸ್ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಪಶ್ಚಿಮ ಹಾಗೂ ಮಧ್ಯ ಆಫ್ರಿಕಾದ 30 ದೇಶಗಳಲ್ಲಿ 550ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು WHO ತಿಳಿಸಿದೆ.
ಸಲಿಂಗಕಾಮಿ ಪುರುಷರಲ್ಲಿ ಹೆಚ್ಚಿನ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿವೆ ಎಂಬುದಾಗಿ ವರದಿಯಾದರೂ ಇದು ಲೈಂಗಿಕ ಸಂಬಂಧಗಳ ಮೂಲಕ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.