Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮೇರಿಕಾದ ವಿರುದ್ಧ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಲು ಕಾರಣವೇನು?

ಅಮೇರಿಕಾದ ವಿರುದ್ಧ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಲು ಕಾರಣವೇನು?
ಟೆಹರಾನ್ , ಬುಧವಾರ, 18 ಜುಲೈ 2018 (11:58 IST)
ಟೆಹರಾನ್ : 2015ರಲ್ಲಿ ಜಾಗತಿಕ ಶಕ್ತ ದೇಶಗಳು ಇರಾನ್ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ ಹೊರಗೆ ಬಂದು ಇರಾನ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಮರುಘೋಷಿಸಿರುವ ಹಿನ್ನಲೆಯಲ್ಲಿ ಇದೀಗ ಅಮೇರಿಕಾದ ವಿರುದ್ಧ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಿದೆ ಎಂಬುದಾಗಿ ತಿಳಿದುಬಂದಿದೆ.


ಈ ವಿಚಾರವನ್ನು ಇರಾನ್ ವಿದೇಶ ಸಚಿವಾಲಯ ತಿಳಿಸಿದ್ದು, ‘ಇರಾನ್ ವಿರುದ್ಧ ಏಕಪಕ್ಷೀಯ ಆರ್ಥಿಕ ದಿಗ್ಬಂಧನಗಳನ್ನು ಕಾನೂನುಬಾಹಿರವಾಗಿ ಮರುಹೇರಿರುವುದಕ್ಕೆ ಅಮೆರಿಕವನ್ನು ಉತ್ತರದಾಯಿಯಾಗಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.


ಹಾಗೇ ‘ರಾಜತಾಂತ್ರಿಕತೆ ಮತ್ತು ಕಾನೂನುಬದ್ಧ ಬದ್ಧತೆಗಳಿಗೆ ಅಮೆರಿಕ ತಿರಸ್ಕಾರ ಹೊಂದಿರುವ ಹೊರತಾಗಿಯೂ ಕಾನೂನಿನ ಆಡಳಿತಕ್ಕೆ ಇರಾನ್ ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುವ ಅದರ ಹವ್ಯಾಸವನ್ನು ಪ್ರಶ್ನಿಸುವುದು ಅಗತ್ಯವಾಗಿದೆ ‘ ಎಂದು ಅವರು ಹೇಳಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ ರೂ.100 ರ ಹೊಸ ಮುಖಬೆಲೆಯ ನೋಟುಗಳು