ಬೊಲಿವಿಯಾ : ಬೊಲಿವಿಯಾ ನಗರದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಧ್ಯೆ ನಡೆದ ಸಂಘರ್ಷಣೆಯ ವೇಳೆ ಪ್ರತಿಭಟನಾಕಾರರು ಅಲ್ಲಿನ ಮೇಯರ್ ನನ್ನು ಎಳೆದು ತಂದು ದೌರ್ಜನ್ಯ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ವಿವಾದಿತ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು ಈ ವೇಳೆ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಮೇಯರ್ ಪ್ಯಾಟ್ರಿಕಾ ಆರ್ಕೆ ಎಂಬುವವರ ಮೇಲೆ ದಾಳಿ ಮಾಡಿ ಬರಿಗಾಲಿನಲ್ಲಿ ಎಳೆದುತಂದು ಮುಖಕ್ಕೆ ಬಣ್ಣ ಎರಚಿ ಆಕೆಯ ಕೂದಲು ಕತ್ತರಿಸಿದ್ದಾರೆ.
ಅಷ್ಟೇ ಅಲ್ಲದೆ ಬಲವಂತವಾಗಿ ಆಕೆಯ ಕೈಯಿಂದ ರಾಜೀನಾಮೆಗೆ ಸಹಿ ಹಾಕಿಸಿದ್ದಾರೆ. ಮೇಯರ್ ಕಚೇರಿಗೂ ಬೆಂಕಿ ಹಚ್ಚಿದ್ದಾರೆ. ಆ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮೇಯರ್ ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.