ಉಪ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಮೈತ್ರಿ ಬಗ್ಗೆ ಜೆಡಿಎಸ್ ವರಿಷ್ಠರು ಹೊಸ ಬಾಂಬ್ ಸಿಡಿಸಿದ್ದಾರೆ.
ನನಗೂ ಮಂಗಳೂರಿಗೂ ಒಂದು ಅವಿನಾಭಾವ ಸಂಬಂಧ ಇದೆ. ಕಳೆದ ಕೆಲ ವರ್ಷಗಳಿಂದ ನಾವು ಹಿಂದಿದ್ದೇವೆ. ನಾವು ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಶಕ್ತಿ ಎಷ್ಟಿದೆಯೋ ಅಷ್ಟು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಒಂದು ವೇಳೆ ಚುನಾವಣೆ ಬಂದರೂ ನಾವು ಸ್ವತಂತ್ರವಾಗಿ ಸ್ಫರ್ಧಿಸುತ್ತೇವೆ. ನಾನು ಮೈತ್ರಿಗೆ ಮೊದಲು ಒಪ್ಪಿರಲಿಲ್ಲ. ಸೋನಿಯಾ ಗಾಂಧಿ, ಗುಲಾಂ ನಬಿ ಆಝಾದ್ ನನ್ನನ್ನು ಸಂಪರ್ಕಿಸಿದ್ದರು. ಕೊನೆಗೆ ಕುಮಾರಸ್ವಾಮಿಯನ್ನು ಮನವೊಲಿಸಿ ಅಧಿಕಾರಕ್ಕೇರಿದರು. ನಂತರ ಏನೆಲ್ಲಾ ಆಯಿತು ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ ಎಂದಿದ್ದಾರೆ.
ಡಿಸೆಂಬರ್ ಒಳಗೆ ರಾಜ್ಯದಲ್ಲಿ ನಾನು ಪಕ್ಷ ಸಂಘಟಿಸಲು ಪ್ರವಾಸ ಮಾಡುತ್ತೇನೆ. ಮುಂದೆ ನಾವು ಮೈತ್ರಿ ಮಾಡುವ ಯೋಚನೆ ಮಾಡಲ್ಲ ಅಂತ ಮಂಗಳೂರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.