ನೈನಿತಾಲ್ : 17 ವರ್ಷದ ಹುಡುಗಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ್ದಕ್ಕೆ ಆರೋಪಿಗಳಿಬ್ಬರು ಆಕೆಯ ಮೂಗು ಕತ್ತರಿಸಿದ ಘಟನೆ ಬಾಗೇಶ್ವರ ಜಿಲ್ಲೆಯ ಕಲ್ಪ್ಲಿಗೈರ್ ತಹಸಿಲ್ ಹಳ್ಳಿಯಲ್ಲಿ ನಡೆದಿದೆ.
ಆರೋಪಿಗಳು ಮತ್ತು ಸಂತ್ರಸ್ತೆ ಒಂದೇ ಗ್ರಾಮದವರಾಗಿದ್ದು, ರಾತ್ರಿಯ ವೇಳೆ ಮನೆಗೆ ನುಗ್ಗಿದ ಆರೋಪಿಗಳು ಹುಡುಗಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾರೆ. ಆ ವೇಳೆ ಹುಡುಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿಗಳು ಹರಿತವಾದ ಚಾಕುವಿನಿಂದ ಆಕೆಯ ಮೂಗನ್ನು ಕತ್ತರಿಸಿದ್ದಾರೆ. ಮತ್ತು ಆಕೆಯ ಪೋಷಕರ ಮೇಲೆ ಹಲ್ಲೆ ಮಾಡಿ ಮನೆಯಲ್ಲಿರುವ ಚಿನ್ನ, ಹಣ ವನ್ನು ದೋಚಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.