ಅಮೇರಿಕಾ : ಹೆಂಡತಿಗೆ ಹೊಡೆದ ಆರೋಪದ ಮೇಲೆ ಜೈಲು ಸೇರಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಹತ್ಯೆಗೈಯಲು ಮಾಡಿದ ಮಾಸ್ಟರ್ ಪ್ಲ್ಯಾನ್ ಇದೀಗ ಬಯಲಾಗಿದೆ.
ಹೌದು. ಹೆಂಡತಿಗೆ ಹೊಡೆದ ಆರೋಪದ ಮೇಲೆ ಜೈಲು ಸೇರಿರುವ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಲು ವಿಮಾನವನ್ನು ಮನೆ ಮೇಲೆ ಬೀಳಿಸಿದ ಘಟನೆ ಅಮೆರಿಕಾದ ಉಟಾದ ಪೇಸನ್ ನಗರದಲ್ಲಿ ನಡೆದಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಮಾನ ಬೀಳುವ ಕೆಲವೇ ಗಂಟೆ ಮೊದಲು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಮನೆಗೆ ಡಿಕ್ಕಿ ಹೊಡೆಯುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ. ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ತಾಯಿ ಹಾಗೂ ಮಗಳು ಮನೆಯಿಂದ ಹೊರಗೋಡಿ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿ ಕೆಲಸ ಮಾಡ್ತಿದ್ದ ಕಂಪನಿಯ ವಿಮಾನವೇ ಪತನಗೊಂಡಿದೆ. ಆರೋಪಿ ಚಾಲಕನಿಗೆ ಹಣ ನೀಡಿ ಪತ್ನಿ ಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ