ಮನಿಲಾ : ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ವಿಶ್ವದೆಲ್ಲೆಡೆ ಕೋವಿಡ್ ಲಸಿಕೆ ಅಭಿಯಾನಗಳು ನಡೆಯುತ್ತಿವೆ.
ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ನಾನಾ ದೇಶಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಅಂತೆಯೇ ಫಿಲಿಪೈನ್ಸ್ ರಾಷ್ಟ್ರ ಕೂಡ ತನ್ನ ನಾಗರಿಕರು ಕೊರೊನಾ ಲಸಿಕೆ ಪಡೆಯುವಂತೆ ತಿಳಿಸಿ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೊಳಿಸಿದೆ.
ಕೋವಿಡ್ ಲಸಿಕೆ ಪಡೆಯದವರು ಮನೆಯಿಂದ ಹೊರಗಡೆ ಬರುವಂತಿಲ್ಲ. ಒಂದು ವೇಳೆ ಹೊರಗಡೆ ಓಡಾಡಿದರೆ ಅಂತಹವರನ್ನು ಬಂಧಿಸಲಾಗುವುದು ಎಂದು ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.