ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್ ಗೆ ಬೆಂಬಲ ನೀಡಲು ಆ ದೇಶಕ್ಕೆ ಭೇಟಿ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಿವಿ ಮಾತನ್ನೂ ಹೇಳಿದ್ದಾರೆ.
9/11 ರ ದಾಳಿ ನಂತರ ಅಮೆರಿಕಾ ತಾಲಿಬಾನ್ ರಾಷ್ಟ್ರದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಉಗ್ರರ ಮಾರಣ ಹೋಮ ನಡೆಸಿತ್ತು. ಈ ವೇಳೆ ಕೆಲವು ತಪ್ಪುಗಳನ್ನೂ ನಾವು ಮಾಡಿದ್ದೆವು. ಆ ದಾಳಿಗಳಿಂದ ಕೆಲವು ಆಂತರಿಕ ಸಂಘರ್ಷಗಳು ನಡೆದವು. ಆ ತಪ್ಪುಗಳನ್ನು ನೀವು ಮಾಡಬೇಡಿ ಎಂದು ಜೋ ಬೈಡನ್ ಇಸ್ರೇಲ್ ಗೆ ಬುದ್ಧಿ ಮಾತು ಹೇಳಿದ್ದಾರೆ.
ಹಮಾಸ್ ಉಗ್ರರ ವಿರುದ್ಧದ ದಾಳಿಯಲ್ಲಿ ಇಸ್ರೇಲ್ ನ್ನು ಬೆಂಬಲಿಸಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಅಧ್ಯಕ್ಷ ಬೆಂಜಾಮಿನ ನೆತನ್ಯಾಹು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರ ಬಳಿಕ ಇದೀಗ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡಾ ಇಸ್ರೇಲ್ ಬೆಂಬಲಿಸಿ ಆ ದೇಶಕ್ಕೆ ಭೇಟಿ ನೀಡಲಿದ್ದಾರೆ.