ಕೀವ್ : ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾಪಡೆಗಳಿಂದ ನಾಶವಾದ ವಿಶ್ವದ ಅತಿದೊಡ್ಡ ವಿಮಾನವನ್ನು ಮರುನಿರ್ಮಾಣ ಮಾಡಲು ಉಕ್ರೇನ್ ಚಿಂತನೆ ನಡೆಸಿದೆ.
ಉಕ್ರೇನ್ ಭಾಷೆಯಲ್ಲಿ `ಮ್ರಿಯಾ ಡ್ರೀಮ್ ಎಂದು ಕರೆಯಲ್ಪಡುವ 2ನೇ ಆಂಟೊನೊವ್ ಆನ್ -225 ಕಾರ್ಗೊ ವಿಮಾನದ ವಿನ್ಯಾಸ ಕಾರ್ಯವೂ ಆರಂಭವಾಗಿದೆ.
ಈ ಕುರಿತು ಆಂಟೊನೊವ್ ಕಂ ತನ್ನ ಫೇಸ್ಬುಕ್ ಪುಟದಲ್ಲಿ ತಿಳಿಸಿದೆ. ರಷ್ಯಾದೊಂದಿಗಿನ ಯುದ್ಧವು ಕೊನೆಗೊಂಡ ನಂತರ ಇದರ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.