ಅಮೆರಿಕ: ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ಅಮೆರಿಕ ನಿವಾಸಿ ಬಾಲಕಿ ಶೆರಿನ್ ಮ್ಯಾಥ್ಯೂಸ್ ಮೃತಪಟ್ಟಿದ್ದಾಳೆ. ಭಾನುವಾರ ಸುರಂಗದಲ್ಲಿ ದೊರೆತ ಶವ ಶೆರಿನ್ ಳದ್ದೇ ಎಂದು ಅಲ್ಲಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶೆರಿನ್ ಭಾರತದ ಬಿಹಾರ ಮೂಲದವಳಾಗಿದ್ದು, ಎರಡು ವರ್ಷದ ಹಿಂದೆ ವೆಸ್ಲೆ ಮ್ಯಾಥ್ಯೂಸ್ ದಂಪತಿ ಈಕೆಯನ್ನು ದತ್ತು ಪಡೆದಿದ್ದರು. ಅ.7ರಂದು ರಾತ್ರಿ ಶೆರಿನ್ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ತಂದೆ ವೆಸ್ಲೆ ಮ್ಯಾಥ್ಯೂಸ್, ಆಕೆಯನ್ನ ಗದರಿಸಿದ್ದಾರೆ. ತಡರಾತ್ರಿ 3ಗಂಟೆಗೆ ಶೆರಿನ್ ಳನ್ನ ಮನೆಯಿಂದ ಹೊರ ಹಾಕಿದ್ದಾನೆ. ಅಂದಿನಿಂದ ಪುಟ್ಟ ಬಾಲೆ ಶೆರಿನ್ ಕಾಣೆಯಾಗಿದ್ದಳು.
ಇದಾದ ಬಳಿಕ ಆಕೆಯ ತಂದೆ ಮಗಳನ್ನು ಹುಡುಕಿಕೊಂಡು ಹೋಗಿದ್ದಾನೆ. ಆದರೆ ಮಗಳು ಪತ್ತೆಯಾಗಿರಲಿಲ್ಲ. ಶೆರಿನ್ ನಾಪತ್ತೆ ಕುರಿತು ಅನುಮಾನಾಸ್ಪದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಂದೆಯನ್ನು ಪೊಲೀಸರು ಬಂಧಿಸಿದ್ದರು.
ಇನ್ನು ಭಾನುವಾರ ಸುರಂಗವೊಂದರಲ್ಲಿ ಬಾಲಕಿ ಶವ ದೊರೆಕಿದ್ದು, ಅದು ಶೆರಿನ್ ಳದ್ದೇ ಶವ ಎಂದು ಪೊಲೀಸರು ಖಚಿತಪಡಿಸಿದ್ದಾರೆ.