ಮಾಸ್ಕೋ(ಜು.24): ರಷ್ಯಾ ಅಧಿಕಾರಿಗಳು ಸಾವಿರಾರು ಡಾಲರ್ ಲಂಚ ಪಡೆಯುತ್ತಿದ್ದವರನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಅನೇಕ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದರೆ ಈ ನಡುವೆ ಸಂಚಾರ ಪೊಲೀಸರ ಮುಖ್ಯಸ್ಥ ಶೌಚಾಲಯ ಮತ್ತು ಅವರ ಮನೆ ಸದ್ಯ ಎಲ್ಲರ ಗಮನ ಸೆಳೆದಿದೆ. ಹೌದು ಈ ಶೌಚಾಲಯ ಚಿನ್ನದಿಂದ ಮಾಡಲ್ಪಟ್ಟಿದೆ ಹಾಗೂ ನೆಲ ಅಮೃತಶಿಲೆಯಿಂದ ಮಾಡಲಾಗಿದೆ.