2021 ರ ಅತ್ಯುತ್ತಮ ಉದ್ಯೋಗದಾತರ ರ್ಯಾಕಿಂಗ್ 2021 ರ ಫೋರ್ಬ್ಸ್ ಪ್ರಕಟಿಸಿದ ಪಟ್ಟಿಯಲ್ಲಿ, ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದಿಂದ ದೇಶದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತೀಯ ಕಾರ್ಪೋರೇಟ್ಗಳ ವಲಯದಲ್ಲಿಯೇ ಅಗ್ರಸ್ಥಾನವನ್ನಲಂ ಕರಿಸಿದೆ.
ಫಿಲಿಪ್ಸ್, ಸನೋಫಿ, ಫೈಜರ್ ಮತ್ತು ಇಂಟೆಲ್ನಂತಹ 750 ಜಾಗತಿಕ ಕಾರ್ಪೋರೇಟ್ಗಳ ಒಟ್ಟಾರೆ ರ್ಯಾಂಕಿಂಗ್ನಲ್ಲಿ ರಿಲಯನ್ಸ್ 52 ನೇ ಸ್ಥಾನದಲ್ಲಿದೆ. ಫೋರ್ಬ್ಸ್ ರ್ಯಾಂಕಿಂಗ್ ಪ್ರಕಾರ (ಐಸಿಐಸಿಐ) ಬ್ಯಾಂಕ್ (ಎಚ್ಡಿಎಫ್ಸಿ) ಬ್ಯಾಂಕ್ 77 ಮತ್ತು (ಎಚ್ಸಿಎಲ್) ಟೆಕ್ನಾಲಜೀಸ್ ಉನ್ನತ 100 ರ್ಯಾಂಕಿಂಗ್ಗಳಲ್ಲಿ 90 ಶ್ರೇಯಾಂಕಗಳಲ್ಲಿರುವ ಇತರ ಭಾರತೀಯ ಹೆಸರುಗಳಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 119 ಮತ್ತು ಲಾರ್ಸೆನ್ ಮತ್ತು ಟ್ಯೂಬ್ರೊ 127 ನೇ ಸ್ಥಾನವನ್ನುಲಂಕರಿಸಿವೆ.
ಇನ್ಫೋಸಿಸ್ 588 ಮತ್ತು ಟಾಟಾ ಗ್ರೂಪ್ 746 ರ ಸ್ಥಾನ ಪಡೆದಿದೆ. ಜೀವ ವಿಮಾ ನಿಗಮ 504 ನೇ ಸ್ಥಾನದಲ್ಲಿದೆ. ಈ ಶ್ರೇಯಾಂಕಗಳನ್ನು ದೀರ್ಘ- ಅವಧಿಯ ಸಮೀಕ್ಷೆಯನ್ನು ಆಧರಿಸಿ ನೀಡಲಾಗಿದ್ದು ಉದ್ಯೋಗಿಗಳು ಹಲವಾರು ಅಂಶಗಳನ್ನು ಪರಿಗಣಿಸಿ ತಮ್ಮ ಉದ್ಯೋಗದಾತರಿಗೆ ಅಂಕಗಳನ್ನು ನೀಡಿದ್ದಾರೆ.