ಚೀನಾ : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಚೀನಾದಲ್ಲಿ ಭಿಕ್ಷುಕರು ಹಣದ ಭಿಕ್ಷೆ ಪಡೆಯಲು ಮಾಡಿದ ಹೊಸ ಪ್ಲ್ಯಾನ್ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ.
ಹೌದು. ಜನರು ಚಿಲ್ಲರೆ ಇಲ್ಲವೆಂದು ಭಿಕ್ಷೆ ಹಾಕದೆ ಹೋಗುತ್ತಿರುವುದನ್ನು ನೋಡಿದ ಭಿಕ್ಷಕರು ಇದೀಗ ಕ್ಯೂಆರ್ ಕೋಡ್ ಬಳಸಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಚೀನಾದ ಪ್ರಮುಖ ಸ್ಥಳಗಳಲ್ಲಿ ಭಿಕ್ಷಕರು ಡಿಜಿಟಲ್ ಪೇಮೆಂಟ್ ಮೂಲಕ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ.
ಆದರೆ ಚೀನಾದ ಅಲಿಪೇ ಹಾಗೂ ಟೆನ್ಸೆಂನ್ ವೀಚಾಟ್ ಪೇ ಕಂಪೆನಿಗಳ ಕ್ಯೂಆರ್ ಕೋಡ್‌ಗಳಿರುವ ಬ್ಯಾಡ್ಜ್‌ನ್ನು ಭಿಕ್ಷುಕರು ಹಾಕಿಕೊಳ್ಳುತ್ತಿದ್ದು, ಡಿಜಿಟಲ್ ಪೇಮೆಂಟ್ ನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯ ವರ್ತಕರು ಈ ರೀತಿ ಮಾಡುತ್ತಿದ್ದು, ಪ್ರತಿ ಪೇಮೆಂಟ್ ಗೆ 7-15 ರೂ. ಕಮಿಷನ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.