ಚೀನಾ : ಚೀನಾದಲ್ಲಿ ಶ್ರೀಮಂತ ರೈತನೊಬ್ಬ ತನ್ನ ಬಿ.ಎಮ್.ಡಬ್ಲ್ಯೂ ಕಾರಿಗೆ ಪೆಟ್ರೋಲ್ ಹಾಕಲು ಕೋಳಿ ಕಳ್ಳತನ ಮಾಡಿ ಸಿಕ್ಕಿಬದ್ದ ಘಟನೆ ನಡೆದಿದೆ.
ಹೌದು. ಈ ಶ್ರೀಮಂತ ರೈತನಿಗೆ ಬಿ.ಎಮ್.ಡಬ್ಲ್ಯೂ ಕಾರನ್ನು ಖರೀದಿಸಬೇಕೆಂಬ ಹಂಬಲವಿತ್ತು. ಅದರಂತೆ ಆತ ಕಾರನ್ನೇನೊ ಖರೀದಿಸಿದ ಆದರೆ ಈ ಕಾರಿಗೆ ಪೆಟ್ರೋಲ್ ಹಾಕಿ ಹಾಕಿ ಆತನಿಗೆ ಸಾಕಾಯ್ತು. ಹಾಗಾಗಿ ತನ್ನ ಕಾರಿಗೆ ಪೆಟ್ರೋಲ್ ಹಾಕಿಸಲು ಕೋಳಿ ಕದಿಯಲು ಶುರು ಮಾಡಿದ.
ಈತ ಸಿಚುವಾನ್ ಪ್ರಾಂತ್ಯದಲ್ಲಿನ ಲಿಂಶುಯಿ ಗ್ರಾಮದಲ್ಲಿ ಕೋಳಿಗಳನ್ನು ಕದಿಯುತ್ತಿದ್ದ. ಮಧ್ಯರಾತ್ರಿಯಲ್ಲಿ ಬೈಕ್ ನಲ್ಲಿ ಹೋಗಿ ಕೋಳಿ ಮತ್ತು ಬಾತು ಕೋಳಿಗಳ ಕಳ್ಳತನ ಮಾಡುತ್ತಿದ್ದ. ಆದರೆ ಊರಿನಲ್ಲಿ ಕೋಳಿಗಳು ಮಾಯವಾಗುತ್ತಿರುವುದನ್ನು ಗಮನಿಸಿದ ಅಲ್ಲಿನ ಜನರು ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಈ ವಿಚಾರ ತಿಳಿಯದ ಶ್ರೀಮಂತ ಮತ್ತೆ ಕೋಳಿ ಕದಿಯಲು ಹೋದಾಗ ಸಿಕ್ಕಿ ಬಿದ್ದ. ಪೊಲೀಸರು ಆತನನ್ನು ಬಂಧಿಸಿದ್ದು, ಕದಿಯಲು ಹೋಗುತ್ತಿದ್ದಾಗ ಬಳಸುತ್ತಿದ್ದ ಬೈಕ್ ಮತ್ತು ಕೋಳಿಗಳನ್ನು ವಶ ಪಡಿಸಿಕೊಂಡಿದ್ದಾರೆ.