ಬಾಂಗ್ಲಾದೇಶ : ಆಡಳಿತ ರೂಢ ಅವಾಮಿ ಲೀಗ್ ಪಾರ್ಟಿಯ ಸಂಸದೆಯೊಬ್ಬರು ತಾವು ಬರೆಯಬೇಕಾಗಿದ್ದ ಪರೀಕ್ಷೆಗಳನ್ನು ತಮ್ಮನ್ನೇ ಹೋಲುವ ಯುವತಿಯರ ಕೈಯಲ್ಲಿ ಬರೆಯಿಸಿ ಸಿಕ್ಕಿಬಿದ್ದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಆಡಳಿತ ರೂಢ ಅವಾಮಿ ಲೀಗ್ ಪಾರ್ಟಿಯ ಸಂಸದೆ ತಮನ್ನಾ ನುಸ್ರತ್ ಅವರು ಬಾಂಗ್ಲಾದೇಶದ ಮುಕ್ತ ವಿಶ್ವವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ತಾವು ಬರೆಯಬೇಕಾಗಿದ್ದ 13 ಪರೀಕ್ಷೆಗಳ ಪೈಕಿ 8 ಪರೀಕ್ಷೆಗಳನ್ನು ತಮ್ಮನ್ನೇ ಹೋಲುವ 8 ಮಂದಿಯಿಂದ ಹೆದರಿಸಿ ಬೆದರಿಸಿ ಬರೆಸಿದ್ದಾರೆ ಎನ್ನಲಾಗಿದೆ.
ಖಾಸಗಿ ಮಾಧ್ಯಮವೊಂದು ಪರೀಕ್ಷಾ ಕೊಠಡಿಗೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಈಗ ವಿವಿ ತಮನ್ನಾ ನುಸ್ರತ್ ಅವರ ಪ್ರವೇಶಾತಿಯನ್ನು ರದ್ದುಪಡಿಸಿದೆ ಎನ್ನಲಾಗಿದೆ.