Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಣ ನೀಡಲು ಆಗದೆ ಮಗುವನ್ನೇ ಅಡವಿಟ್ಟ ಪಾಪಿ ತಂದೆ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?

ಹಣ ನೀಡಲು ಆಗದೆ ಮಗುವನ್ನೇ ಅಡವಿಟ್ಟ ಪಾಪಿ ತಂದೆ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?
ಬೀಜಿಂಗ್ , ಬುಧವಾರ, 17 ಏಪ್ರಿಲ್ 2019 (09:48 IST)
ಬೀಜಿಂಗ್ : ತಂದೆ ತನ್ನ ಮಕ್ಕಳಿಗಾಗಿ ಇಡೀ ಜೀವನವನ್ನೇ ಅಡವಿಡುತ್ತಾನೆ. ಆದರೆ ಚೀನಾದಲ್ಲಿ ತಂದೆಯೊಬ್ಬ ಊಟಕ್ಕೆ 10ರೂ ಕೊಡಲು ಆಗದೇ ಮಗುವನ್ನೇ  ಅಡವಿಟ್ಟಿದ್ದಾನೆ.

ಹೌದು. ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬ ಹೋಟೆಲ್‌ ನಲ್ಲಿ 62 ರೂ. ಮೊತ್ತದ ಊಟ ಮಾಡಿದ್ದು, ಹಣ ನೀಡುವಾಗ 10 ರೂ ಕಡಿಮೆಯಾಗಿತ್ತು. ಅದಕ್ಕಾಗಿ ಆತ ತನ್ನ 2 ವರ್ಷದ ಮಗಳನ್ನೇ ಅಡವಿಟ್ಟು, ಮರುದಿನ ಬಂದು ಹಣ ನೀಡಿ ಆಕೆಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

 

ಆ ವೇಳೆ ಬಿಟ್ಟು ಹೋಗುತ್ತಿರುವ ತನ್ನ ತಂದೆಯ ಬಳಿ ಮಗು ಅಳುತ್ತಾ ಹೋದಾಗ ಆತ ಮಗುವನ್ನು ಹೊಟೇಲ್ ನೊಳಗೆ ತಳ್ಳಿ ಹೋಗುತ್ತಾನೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆ ಪಾಪಿ ತಂದೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಚುನಾವಣಾ ಆಯೋಗ