ಗಾರ್ಮಿನ್ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಶ್ರೀನಿವಾಸ್ ಅವರನ್ನ ಕನ್ಯಾಸ್`ನಲ್ಲಿ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ವಾಸವಿರುವ ತೆಲುಗು ಭಾಷಿಕರಿಗೆ ತೆಲಂಗಾಣ ಅಮೆರಿಕನ್ ತೆಲುಗು ಅಸೋಸಿಯೇಶನ್ ಕೆಲ ಭದ್ರತಾ ಸೂಚನೆಗಳನ್ನ ನೀಡಿದೆ.
ನಾವು ಎಲ್ಲೇ ನೆಲೆಸಿದ್ದರೂ ನಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಹಪಾಹಪಿಸುತ್ತೇವೆ. ಅದರೆ, ಅಮೆರಿಕದಲ್ಲಿ ಜನಾಂಗೀಯ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನನಿಕ ಸ್ಥಳಗಳಲ್ಲಿ ಇಂಗ್ಲೀಷ್`ನಲ್ಲೇ ಮಾತನಾಡುವಂತೆ ಸೂಚಿಸಲಾಗಿದೆ.
ಯಾವುದೇ ಸಂದರ್ಭದಲ್ಲೂ ಯಾವುದೇ ಕಾರಣಕ್ಕೂ ಯಾರ ಜೊತೆಗೂ ಸಾರ್ವಜನಿಕವಾಗಿ ಮಾತಿನ ಸಂಘರ್ಷಕ್ಕೆ ಇಳಿಯಬೇಡಿ, ಕೂಡಲೇ ಆ ಸ್ಥಳವನ್ನ ತೊರೆದು ಹೊರಟುಬಿಡಿ. ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೆ ಓಡಾಡಬೇಡಿ ಎಂದೂ ಸೂಚಿಸಲಾಗಿದೆ.
.ಕಳೆದ ಬುಧವಾರ ಅಮೆರಿಕದ ಮಿಸ್ಸೌರಿ ರಾಜ್ಯದ ಕನ್ಸಾಸ್ ನಗರದ ಒಲಥೆ ಪ್ರದೇಶದ ಆಸ್ಟೀನ್ ಬಾರ್`ನಲ್ಲಿ ಶ್ರೀನಿವಾಸ್ ಜೊತೆ ಜಗಳ ತೆಗೆದಿದ್ದ ಅಮೆರಿಕ ಪ್ರಜೆ, ನಿನ್ನ ದೇಶಕ್ಕೆ ಹೊರಟುಹೋಗು ಎಂದು ಕೂಗಾಡಿ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಶ್ರೀನಿವಾಸ್ ಮೃತಪಟ್ಟು, ಮತ್ತೊಬ್ಬ ಸ್ನೇಹಿತ ಗಾಯಗೊಂಡಿದ್ದ.
ಶ್ರೀನಿವಾಸ್ ಮೃತದೇಹವನ್ನ ಇಂದು ತವರಿಗೆ ತರಲಾಗಿದ್ದು, ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ.