Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೈರಿ ಬಿಡುಗಡೆ ಬಳಿಕ ಕಾಂಗ್ರೆಸ್ಸಿಗರಿಗೆ ನಿಮ್ಹಾನ್ಸ್‌ಗೆ ತೆರಳುವ ಸ್ಥಿತಿ: ಶೆಟ್ಟರ್

ಡೈರಿ ಬಿಡುಗಡೆ ಬಳಿಕ ಕಾಂಗ್ರೆಸ್ಸಿಗರಿಗೆ ನಿಮ್ಹಾನ್ಸ್‌ಗೆ ತೆರಳುವ ಸ್ಥಿತಿ: ಶೆಟ್ಟರ್
ಹುಬ್ಬಳ್ಳಿ , ಮಂಗಳವಾರ, 28 ಫೆಬ್ರವರಿ 2017 (17:35 IST)
ಡೈರಿ ಬಿಡುಗಡೆ ಬಳಿಕ ಕಾಂಗ್ರೆಸ್ಸಿಗರು ನಿಮ್ಹಾನ್ಸ್‌ಗೆ ತೆರಳುವ ಸ್ಥಿತಿ ಬಂದಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
 
ಡೈರಿ ಬಿಡುಗಡೆಯ ಆರಂಭದಲ್ಲಿ ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡುತ್ತಿದ್ದರು. ಇದೀಗ ಡೈರಿ ಗಂಭೀರತೆಯ ಅರಿವಾಗಿದ್ದರಿಂದ ಹುಚ್ಚಾಸ್ಪತ್ರೆಗೆ ತೆರಳುವಂತಹ ಸ್ಥಿತಿ ಬಂದೊದಗಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ಡೈರಿಯ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆದಲ್ಲಿ ಬಹುತೇಕ ಕಾಂಗ್ರೆಸ್ ಮುಖಂಡರು ಜೈಲಿಗೆ ತೆರಳುವಂತಹ ಸ್ಥಿತಿ ಬರುತ್ತದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಗದಗದಲ್ಲಿ ಕಪ್ಪತಗುಡ್ಡವನ್ನು ರಕ್ಷಿತ ಅರಣ್ಯಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಸಾವಿರಾರು ಜನರು ಪ್ರತಿಭಟನೆ ಮಾಡುತ್ತಿದ್ದರೂ ಸರಕಾರ ಮೌನವಾಗಿದೆ. ಉದ್ಯಮಿ ಬುಲ್ಡೋಟ್ ಒತ್ತಡದಿಂದಲೇ ಸರಕಾರ ಘೋಷಣೆಗೆ ಹಿಂದೇಟು ಹಾಕುತ್ತಿದೆ. ಕಿಕ್ ಬ್ಯಾಕ್ ಪಡೆದಿದ್ದರಿಂದಲೇ ಸರಕಾರ ಇಂತಹ ವರ್ತನೆ ತೋರುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಿಯ ಮನೆಯಲ್ಲಿ ಕೋಟಿ ಬಾಳುವ 5000 ಸೀರೆಗಳು ಪತ್ತೆ, ಎಸಿಬಿ ಅಧಿಕಾರಿಗಳಿಗೇ ಶಾಕ್