ನವದೆಹಲಿ: ಜಗತ್ತಿಗೆ ಒಬ್ಬನೇ ಸೂರ್ಯ ಎನ್ನುವುದು ಪ್ರಚಲಿತ ಮಾತು. ಆದರೆ ಒಂದು ಕಾಲದಲ್ಲಿ ಸೂರ್ಯನಿಗೂ ಅವಳಿಯಿದ್ದ ಎಂದು ಹಾರ್ವರ್ಡ್ ವಿವಿಯ ಸಂಶೋಧಕರು ಹೇಳಿದ್ದಾರೆ.
ಈ ಜಗತ್ತು, ಸೌರ ಮಂಡಲ ರೂಪುಗೊಂಡಾಗ ಸೂರ್ಯನಿಗೆ ತದ್ರೂಪವೊಂದಿತ್ತು. ಆದರೆ ಕಾಲ ಕಳೆದಂತೆ ಇದು ನಶಿಸಿತು. ಈ ರೀತಿ ಸೌರಮಂಡಲದಲ್ಲಿ ಅನೇಕ ನಶಿಸಿದ ಗ್ರಹಗಳು ಇದ್ದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸೌರ ಮಂಡಲದ ಹೊರಾವರಣದಲ್ಲಿರುವ ಓರ್ಟ್ ಕ್ಲೌಡ್ ನಲ್ಲಿ ಈ ಅವಳಿ ಸೂರ್ಯನ ಅವಶೇಷ ಕಾಣಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯನ ಬಗೆಗಿನ ಅಧ್ಯಯನದಲ್ಲಿ ಈ ಅಂಶ ಮಹತ್ವ ಪಡೆದಿದೆ.