ಕಾಬೂಲ್ : ಅಂತಾರಾಷ್ಟ್ರೀಯ ಒಪ್ಪಿಗೆ ಬಯಸುವ ತಾಲಿಬಾನ್ ಮೊದಲು ತಮ್ಮ ದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಿಬೇಕು ಎಂದು ವಿಶ್ವಸಂಸ್ಥೆ ತಾಲಿಬಾನ್ಗೆ ಸಂದೇಶವನ್ನು ನೀಡಿದೆ.
ತಾಲಿಬಾನ್ ಸರ್ಕಾರ ಅಂತರಾಷ್ಟ್ರೀಯ ಒಪ್ಪಿಗೆ ಪಡೆಯಬೇಕು ಎಂದು ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ಯುಎಸ್ ಮಿಷನ್ ಮುಖ್ಯಸ್ಥ ಇಯಾನ್ ಮೆಕ್ಕಾರಿ ಈ ಕುರಿತು ಟ್ವಿಟ್ಟರ್ನಲ್ಲಿ ಉತ್ತರ ಕೊಟ್ಟಿದ್ದು, ಕಳೆದ ವರ್ಷ ದೋಹಾದಲ್ಲಿ, ನಾವು ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ತಾಲಿಬಾನ್ನೊಂದಿಗೆ ಸಂವಾದವನ್ನು ನಡೆಸಿದ್ದೇವೆ.
ನಾವು ಯುಎನ್ ನಾಗರಿಕರು ಮತ್ತು ಅಫ್ಘಾನ್ ಜನರೊಂದಿಗೆ ವ್ಯಾಪಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಲವು ಸವತ್ತುಗಳನ್ನು ಒದಗಿಸಿದ್ದೇವೆ. ನಾವು ಸಹಾಯ ಮಾಡಲು ಸಾಧ್ಯವಾಗಿದೆ ಎಂದು ನನಗೆ ಸಂತೋಷವಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ನಾವು ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.