ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶುಗರ್ ಬೇಬಿ ಪ್ರೌವೃತ್ತಿ ಬಳಿಕ ಸ್ಟೆಲ್ದಿಂಗ್ ಎಂಬ ಕೆಟ್ಟ ಚಾಳಿಯೊಂದು ಶುರುವಾಗಿದೆ. ಹಲವು ಮಹಿಳೆಯರು ಪುರುಷರ ಈ ಸ್ಟೆಲ್ದಿಂಗ್ ಚಟಕ್ಕೆ ತುತ್ತಾಗುತ್ತಿರುವ ಬಗ್ಗೆ ವರದಿಯಾಗಿದೆ.
ಸಂಗಾತಿ ಜೊತೆ ಸಮ್ಮತಿ ಸೆಕ್ಸ್ ನಡೆಸುವಾಗ ಸುರಕ್ಷಿತ ಲೈಂಗಿಕತೆಗಾಗಿ ಬಳಸುವ ಕಾಂಡೂಮನ್ನ ಅರ್ಧದಲ್ಲೇ ಸಂಗಾತಿ ಅನುಮತಿ ಪಡೆಯದೇ ತೆಗೆಯುವುದನ್ನ ಸ್ಟೆಲ್ದಿಂಗ್ ಎಂದು ಕರೆಯಲಾಗುತ್ತದೆ. ಇದನ್ನ ಸಂಗಾತಿಗೆ ಮಾಡುವ ದ್ರೋಹ, ಅತ್ಯಾಚಾರಕ್ಕೆ ಸಮ ಎಂದು ಕಾನೂನು ಪಂಡಿತರು ವಿಶ್ಲೇಷಿಸುತ್ತಿದ್ಧಾರೆ.
ಇಂಗ್ಲೆಂಡ್ ಕಾನೂನಿನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಪುರುಷ ತನ್ನ ಜನನಾಂಗವನ್ನ ಸ್ತ್ರೀಜನನಾಂಗಕ್ಕೆ ಹಾಕುವುದು ಅತ್ಯಾಚಾರ ಎಂದು ವಿವರಿಸಲಾಗಿದೆ. ಹೀಗಾಗಿ, ಸ್ಟೆಲ್ದಿಂಗ್ ಚಟಕ್ಕೆ ಬಿದ್ದಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಪತ್ರಿಕೆಗಳಲ್ಲಿ ಸ್ಟೆಲ್ದಿಂಗ್ ವರದಿಗಳು ಪ್ರಸಾರವಾಗುತ್ತಿದ್ದಂತೆ ಅಮೆರಿಕದ ಹಲವು ಯುವತಿಯರು ತಮಗಾದ ವಂಚನೆಯ ಬಗ್ಗೆ ಹೇಳಿಕೊಳ್ಳಲು ಮುಂದೆ ಬಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ