ಕೆಪಿಸಿಸಿ ಕಚೇರಿಯಲ್ಲಿಯೇ ಕಾಂಗ್ರೆಸ್ ಪಕ್ಷದ ಮೂವರು ಮುಂಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕರಪತ್ರಗಳನ್ನು ಹಂಚಿದ ಘಟನೆ ವರದಿಯಾಗಿದೆ.
ಸಿಎಂ ಸಿದ್ದರಾಮಯ್ಯ ಗೃಹ ಸಚಿವ ಜಿ.ಪರಮೇಶ್ವರ್‌ರನ್ನು ಸೋಲಿಸಲು ಪ್ಲ್ಯಾನ್ ಮಾಡಿದರು. ಪ್ಲ್ಯಾನ್ ಸಫಲವಾಗಿದ್ದರಿಂದ ಸಿಎಂ ಆಗಿದ್ದಾರೆ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪರಿಷತ್ ನಾಮಕರಣದಲ್ಲಿಯೂ ಸಿಎಂ ಸಿದ್ದರಾಮಯ್ಯ ಕೈ ಮೇಲುಗೈಯಾಗಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಜಿ.ಪರಮೇಶ್ವರ್‌ರನ್ನು ಎತ್ತಂಗಡಿ ಮಾಡುವ ತಂತ್ರ ಸಿಎಂ ಮಾಡುತ್ತಿದ್ದಾರೆ. ಸಿಎಂ ಗೆ ತಮ್ಮ ಮಾತನ್ನು ಕೇಳುವ ವ್ಯಕ್ತಿ ಬೇಕು ಎಂದು ಕರಪತ್ರದಲ್ಲಿ ತಿಳಿಸಲಾಗಿದೆ,
ಮಹಾದೇವಪುರದ ಕಾಂಗ್ರೆಸ್ ಮುಖಂಡರಾದ ನಾಗೇಶ್, ಮಾಗಡಿ ಜಯರಾಜ್ ಮತ್ತು ಪರಮೇಶ್ವರ್ ಅಭಿಮಾನಿ ಬಳಗದ ಅಧ್ಯಕ್ಷ ಭೈರಪ್ಪ ಕರಪತ್ರ ಹಂಚಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರ ಪ್ರಭಾವಿ ನಾಯಕರಿಲ್ಲ. ಲಿಂಗಾಯುತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ, ಪರಮೇಶ್ವರ್ ಅವರೇ ಮುಂದುವರಿಯಬೇಕು ಎಂದು ಜಿ.ಪರಮೇಶ್ವರ್ ಬೆಂಬಲಿಗರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.