Publish Date: Wed, 31 Aug 2022 (09:40 IST)
Updated Date: Wed, 31 Aug 2022 (09:29 IST)
ಮಾಸ್ಕೋ : ಶೀತಲ ಸಮರವನ್ನು ಶಾಂತವಾಗಿಯೇ ಕೊನೆಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರು ಮಂಗಳವಾರ ತಮ್ಮ 91ನೇ ವಯಸ್ಸಿಗೆ ನಿಧನರಾಗಿದ್ದಾರೆ.
ಗೋರ್ಬಚೇವ್ ಅವರು ಗಂಭೀರವಾದ ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಸಂಜೆ ನಿಧನರಾದರು ಎಂದು ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ತಿಳಿಸಿದೆ.
ಕೊನೆಯ ಸೋವಿಯತ್ ಅಧ್ಯಕ್ಷರಾದ ಗೋರ್ಬಚೇವ್ ಅವರು ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳೊಂದಿಗೆ ಶಸ್ತ್ರಾಸ್ತ್ರವನ್ನು ಕಡಿತಗೊಳಿಸುವ ಒಪ್ಪಂದಗಳನ್ನು ಮಾಡಿಕೊಂಡು ಶೀತಲ ಸಮರಕ್ಕೆ ಅಂತ್ಯ ಹಾಡಿದ್ದರು. ಆದರೆ ಸೋವಿಯತ್ ಒಕ್ಕೂಟದ ಪತನವನ್ನು ತಮ್ಮಿಂದ ತಡೆಯಲು ಸಾಧ್ಯವಾಗಿರಲಿಲ್ಲ.