Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಖತ್ ಫನ್ನಿ: ಮನೆ ಕಡೆ ಹುಷಾರು ಎಂದಿದ್ದಕ್ಕೆ ಈತ ಮಾಡಿದ್ದೇನು ನೋಡಿ (ವಿಡಿಯೋ)

ಸಖತ್ ಫನ್ನಿ: ಮನೆ ಕಡೆ ಹುಷಾರು ಎಂದಿದ್ದಕ್ಕೆ ಈತ ಮಾಡಿದ್ದೇನು ನೋಡಿ (ವಿಡಿಯೋ)
ಪಿಟ್ಸ್‌ಬರ್ಗ್ , ಬುಧವಾರ, 14 ಸೆಪ್ಟಂಬರ್ 2016 (13:07 IST)
ನಿಮ್ಮನ್ನು ಮನೆಯಲ್ಲಿಯೇ ಬಿಟ್ಟು ಅಪ್ಪ ಅಮ್ಮ ಮನೆಯಿಂದ ಹೊರ ಹೋಗಬೇಕಾದರೆ ಮನೆ ಕಡೆ ಕಾಳಜಿ ಎನ್ನುವುದು ಸಾಮಾನ್ಯ ಸಂಗತಿ. ಪೆನ್ಸಿಲ್‌ವೆನ್ವಿಯಾದ ಆ ಅಪ್ಪ ಅಮ್ಮ ತಮ್ಮ ಮಗನಿಗೆ ಇದೇ ಮಾತನ್ನು ಹೇಳಿದ್ದರು. ಅದಕ್ಕೆ ಆತ ಮಾಡಿದ್ದೇನು ಗೊತ್ತಾ? ನೀವು ಊಹಿಸಲು ಸಾಧ್ಯವಿಲ್ಲ. ಆತ ಅಂತಹದ್ದೇನು ಮಾಡಿದ? ತಿಳಿಯಲು ಮುಂದೆ ಓದಿ. 
ಜೋನೊಥಾನ್ ಎಂಬ ಯುವಕ ತನ್ನ ಪೋಷಕರು ಐದು ದಿನಗಳ ಮಟ್ಟಿಗೆ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಮನೆ ಹೊರಗೆ, ಒಳಗೆಲ್ಲ ಸೆಲ್ಲೋ ಟೇಪ್ ಸುತ್ತಿದ್ದಾನೆ. ಬರೊಬ್ಬರಿ 60 ಮೈಲಿ ವಿಸ್ತೀರ್ಣವಿರುವ ಟೇಪ್‌ನ್ನು ಮನೆಗೆ ಸುತ್ತಿರುವ ಆತ ಇದಕ್ಕಾಗಿ 1,000ರೋಲ್ ಸೆಲ್ಲೋಟೇಪ್ ಬಳಸಿದ್ದಾನೆ. ಇದನ್ನು ಮಾಡಲು ಆತನಿಗೆ ಬರೊಬ್ಬರಿ 2 ದಿನಗಳು ಹಿಡಿದಿವೆ.
 
ಆತ ಇಷ್ಟೆಲ್ಲಾ ಶ್ರಮ ಪಟ್ಟು ಈ ಕೆಲಸವನ್ನು ಮಾಡಿದ್ದು ಏಕೆ ಗೊತ್ತಾ? ಹ್ಹ ಹ್ಹ ಹ್ಹ.. ತನ್ನ ತಂದೆ-ತಾಯಿ ಮನೆ ಕಾಳಜಿ ತಗೋ ಎಂದಿದ್ದಕ್ಕಂತೆ!!!!
 
ಮನೆಗೆ ಹಿಂತಿರುಗಿದ ಆತನ ತಂದೆ-ತಾಯಿ ಮಗನ ಈ ಮೂರ್ಖತನವನ್ನು ನೋಡಿ ದಂಗಾಗಿ ಹೋಗಿದ್ದಾರೆ.
 
  ಸಖತ್ ಫನ್ನಿ: ಮನೆ ಕಡೆ ಹುಷಾರು ಎಂದಿದ್ದಕ್ಕೆ ಈತ ಮಾಡಿದ್ದೇನು ನೋಡಿ (ವಿಡಿಯೋ)


Share this Story:

Follow Webdunia kannada

ಮುಂದಿನ ಸುದ್ದಿ

ಝೆನ್‌ ಮೊಬೈಲ್‌ನಿಂದ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ