Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಝೆನ್‌ ಮೊಬೈಲ್‌ನಿಂದ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಝೆನ್‌ ಮೊಬೈಲ್‌ನಿಂದ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ನವದೆಹಲಿ , ಬುಧವಾರ, 14 ಸೆಪ್ಟಂಬರ್ 2016 (12:56 IST)
ಸ್ವದೇಶಿ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಝೆನ್ ಮೊಬೈಲ್, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಚ್ಚ ಹೊಸ 'ಅಡ್ಮಿರ್ ಸ್ಟಾರ್' ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 3,290 ರೂಪಾಯಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. 
'ಅಡ್ಮಿರ್ ಸ್ಟಾರ್' ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 4.5 ಇಂಚಿನ ಎಫ್‌ಡಬ್ಲ್ಯೂವಿಜಿಎ ಡಿಸ್‌ಪ್ಲೇ, 512 ಎಮ್‌ಬಿ ರ್ಯಾಮ್ ಜೊತೆ 1.3 ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ಆಪರೇಟಿಂಗ್ ಸಿಸ್ಟಮ್ ವಿಶೇಷತೆಯನ್ನು ಒಳಗೊಂಡಿದೆ. 
 
ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿರುವ ಹೊಸ ವೈಶಿಷ್ಟ್ಯದ 'ಅಡ್ಮಿರ್ ಸ್ಟಾರ್' ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವ ನಂಬಿಕೆ ಇಂದೆ ಎಂದು ಝನ್ ಮೊಬೈಲ್ ಸಿಇಓ ಸಂಜಯ್ ಕಲಿರೊನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಈ ಸ್ಮಾರ್ಟ್‌ಪೋನ್‌ಗಳು ಎಸ್‌ಓಎಸ್ ವೈಶಿಷ್ಟ್ಯವನ್ನು ಒಳಗೊಂಡಿದ್ದು, ಈ ವಿಶೇಷತೆಯ ಸಹಾಯದಿಂದ ಬಳಕೆದಾರರು ತುರ್ತು ಸಮಯದಲ್ಲಿ ಐದು ಪೂರ್ವ ನಿರ್ಧಾರಿತ ಸಂಖ್ಯೆಗಳಿಗೆ ತಮ್ಮ ಸ್ಥಳದ ವಿವರಗಳನ್ನು ಸೆಂಡ್ ಮಾಡಲು ಅನುಮತಿಸುತ್ತದೆ.
 
'ಅಡ್ಮಿರ್ ಸ್ಟಾರ್' ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 5 ಎಂಪಿ ರಿಯರ್ ಕ್ಯಾಮೆರಾ ಹಾಗೂ 1.3 ಫ್ರಂಟ್ ಕ್ಯಾಮೆರಾ ಹೊಂದಿದ್ದು, 8 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ 32 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹಾಗೂ 2000ಎಮ್‌ಎಚ್‌ಝಡ್ ಬ್ಯಾಟರಿ ವಿಶೇಷತೆ ಹೊಂದಿದೆ.
 
ಈ ಸ್ಮಾರ್ಟ್‌ಪೋನ್‌ಗಳು ಝೆನ್ ಅಪ್ಲಿಕೇಶನ್ ಕ್ಲೌಡ್ ಮತ್ತು ಅಪ್ಲಿಕೇಶನ್ ಸೇರಿದಂತೆ ಲೈವ್ ಟಿವಿ ಸ್ಟ್ರೀಮಿಂಗ್ ಅಪ್ಲಿಕೇಶನ್ ನೆಕ್ಸ್ಜಿಟಿವಿ, ವೀಡಿಯೊ ಪ್ಲೇಯರ್ ವೊಲಿವ್ ಮತ್ತು ಸಾವನ್ ಆಪ್‌ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಪ್ರೀತಿ ಮಾಡಿಸಿತು ಮದುವೆ ಕ್ಯಾನ್ಸಲ್