ವಾಷಿಂಗ್ಟನ್: ಮದ್ಯಪ್ರಿಯರಿಗೆ ಶಾಕ್ ಕೊಡುವಂತಹ ವಿಚಾರವನ್ನು ಅಮೆರಿಕಾದ ಅಧ್ಯಯನವೊಂದು ಬಹಿರಂಗಪಡಿಸಿದೆ.
ವಾಷಿಂಗ್ಟನ್ ವಿವಿ ನಡೆಸಿದ ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಮದ್ಯಪಾನದಿಂದಾಗಿಯೇ ಮೃತಪಡುವವರ ಸಂಖ್ಯೆ 2.8 ಮಿಲಿಯನ್ ಗೂ ಹೆಚ್ಚು ಎಂಬ ಸಂಗತಿ ಹೊರಬಿದ್ದಿದೆ.
ಅದೂ 15 ರಿಂದ 49 ವರ್ಷ ವಯಸ್ಸಿನೊಳಗಿನವರು ಇದೇ ಕಾರಣಕ್ಕೆ ಸಾಯುತ್ತಿದ್ದಾರಂತೆ. ಹಾಗಂತ ಸಮೀಕ್ಷೆ ಹೇಳಿದೆ. ಇದುವರೆಗೆ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಯುವ ಜನಾಂಗ ಈ ಕೆಟ್ಟ ಚಾಳಿಯನ್ನು ಬಿಡಲು ತಯಾರಿಲ್ಲ. ಈ ನಿಟ್ಟಿನಲ್ಲಿ ಸುಮಾರು 195 ಕ್ಕೂ ಹೆಚ್ಚು ದೇಶಗಳ ಮೇಲೆ ಅಧ್ಯಯನ ನಡೆಸಿ ಅಧ್ಯಯನಕಾರರು ಈ ತೀರ್ಮಾನಕ್ಕೆ ಬಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.