ನ್ಯೂಯಾರ್ಕ್ : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್ಲೆಸ್ ಆಗಿ ಹಾಡು ಹಾಡಿದ್ದಾರೆ.
ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಲುವಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಸೆರೆನಾ ಬೆತ್ತಲೆ ಎದೆಯಲ್ಲಿ ತಮ್ಮ ಎರಡು ಕೈಗಳಿಂದ ವಿಲಿಯಮ್ಸ್ ತಮ್ಮ ಎದೆಯನ್ನು ಮುಚ್ಚಿಕೊಂಡು 1991ರಲ್ಲಿ ಆಸ್ಟ್ರೇಲಿಯನ್ ಬ್ಯಾಂಡ್ನ ಸ್ತನ ಕ್ಯಾನ್ಸರ್ ಕುರಿತ "ಐ ಟಚ್ ಮೈಸೆಲ್ಫ್" ಹಾಡನ್ನು ಹಾಡಿದ್ದಾರೆ.
ಈ ವಿಡಿಯೋವನ್ನು ಸೆರೆನಾ ವಿಲಿಯಮ್ಸ್ ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಸೆರೆನಾ ಈ ವಿಡಿಯೋ ಪೋಸ್ಟ್ ಮಾಡಿದ 10 ಗಂಟೆಯೊಳಗಾಗಿ 13 ಲಕ್ಷ ಬಾರಿ ವೀಕ್ಷಿಸಲಾಗಿದೆ. ಜತೆಗೆ ನೆಟ್ಟಿಗರು ಕೂಡ ಸೆರೆನಾ ವಿಲಿಯಮ್ಸ್ ರ ಈ ಪ್ರಯತ್ನಕ್ಕೆ ಮತ್ತು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.