Select Your Language

Notifications

webdunia
webdunia
webdunia
webdunia

ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು

ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು
ನ್ಯೂಯಾರ್ಕ್ , ಸೋಮವಾರ, 12 ಜೂನ್ 2023 (13:02 IST)
ನ್ಯೂಯಾರ್ಕ್ : ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದೆಯೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನಿವಾಸದ ಬೆಡ್ರೂಮ್, ಬಾತ್ರೂಮ್ನಲ್ಲಿ ಜೋಡಿಸಿಟ್ಟಿದ್ದಾರೆ ಎನ್ನಲಾದ ಫೋಟೋಗಳು ವೈರಲ್ ಆಗಿವೆ.
 
ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ವಾಪಸ್ ನೀಡದೇ ತಮ್ಮ ಬಳಿಯೇ ಇಟ್ಟುಕೊಂಡು ಕಾನೂನು ಪ್ರಕ್ರಿಯೆಗೆ ತೊಡಕುಂಟು ಮಾಡಿದ್ದಾರೆಂಬ ಆರೋಪದ ಮೇಲೆ ಟ್ರಂಪ್ ವಿರುದ್ಧ ಫೆಡರಲ್ ಗ್ರ್ಯಾಂಡ್ ಜ್ಯೂರಿ ದೋಷರೋಪಪಟ್ಟಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಫೋಟೋಗಳು ಬಿಡುಗಡೆಯಾಗಿವೆ. 

ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್ನಲ್ಲಿರುವ ಟ್ರಂಪ್ ನಿವಾಸದಲ್ಲಿ ಸರ್ಕಾರಿ ದಾಖಲೆಗಳನ್ನು ಹೊಂದಿರುವ ಬಾಕ್ಸ್ಗಳ ಫೋಟೋಗಳು ಬಿಡುಗಡೆಯಾಗಿದೆ. ಟ್ರಂಪ್ ನಿವಾಸದ ಬೆಡ್ರೂಮ್, ಬಾತ್ರೂಮ್ನಲ್ಲೂ ದಾಖಲೆಗಳನ್ನು ಸಂಗ್ರಹಿಸಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಅಮೆರಿಕದ ಪರಮಾಣ ಶಸ್ತ್ರಾಸ್ತ್ರ ಕಾರ್ಯಯೋಜನೆ, ಯುಎಸ್ ಮತ್ತು ಮಿತ್ರರಾಷ್ಟ್ರಗಳ ಸಂಬಂಧ, ಪ್ರತೀಕಾರದ ಮಿಲಿಟರಿ ದಾಳಿಯ ಯುಎಸ್ ಯೋಜನೆ ಇತ್ಯಾದಿ ಪ್ರಮುಖ ಮಾಹಿತಿ ದಾಖಲಿಸಲಾಗಿರುವ ಫೈಲ್ಗಳು ಇವಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 1 ರಿಂದ ಅನ್ನಭಾಗ್ಯ ಜಾರಿ : ಸಿದ್ದರಾಮಯ್ಯ