ಇಂಗ್ಲೆಂಡ: ಇಂಗ್ಲೆಂಡನ ಸುಲುಕೋವಿಸ್ಕಿ ಮತ್ತು ಮಿಯಾಮಿ ವಿಶ್ವವಿದ್ಯಾಲಯದ ಕಡಲ ವಿಜ್ಞಾನಿಗಳು ಜೀವಂತ ಗರ್ಭಿಣಿ ಶಾರ್ಕ್ ಮೇಲೆ ಸೋನೋಗ್ರಾಮ್ ಪರೀಕ್ಷೆ ನಡೆಸಿ ವೈದ್ಯಕೀಯ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕಡಲ ವಿಜ್ಞಾನಿಗಳು 12.5 ಅಡಿ ಉದ್ದದ ಟೈಗರ್ ಶಾರ್ಕ್ ನ್ನ ಸೋನೊಗ್ರಾಮ್ ಪರೀಕ್ಷೆಗೆ ಒಳಪಡಿಸಿ, ಅದರ ಗರ್ಭದಲ್ಲಿ ಬಾಯಿತುಂಬ ಹಲ್ಲುಗಳಿರುವ 20 ಶಾರ್ಕ್ ಮರಿಗಳನ್ನು ಪತ್ತೆ ಹಚ್ಚಿದ್ದಾರೆ. ಜೀವಂತ ಶಾರ್ಕ್ ಮೇಲೆ ಇಂತಹ ಪರೀಕ್ಷೆ ನಡೆದಿರುವುದು ಪ್ರಪಂಚದಲ್ಲಿಯೇ ಮೊದಲನೆಯ ಪ್ರಯೋಗವಾಗಿದೆ. ಈ ಪ್ರಯೋಗವನ್ನು ಮೊದಲು ಗರ್ಭಿಣಿ ಶಾರ್ಕ್ ನ್ನ ಕೊಂದು, ಅದರ ಹೊಟ್ಟೆ ಭಾಗವನ್ನು ಸೀಳಿ ಮಾಡುತ್ತಿದ್ದರು. ಕೆಲವು ವೇಳೆ ಅದು ಗರ್ಭ ಧರಿಸದಿದ್ದರೂ, ಅದನ್ನು ಕಂಡು ಹಿಡಿಯಲು ಕೊಂಡು ಹಾಕಲಾಗುತ್ತಿತ್ತು. ಸಂದರ್ಭದಲ್ಲಿ ಅಮಾಯಕ ಸಾವಿರಾರು ಶಾರ್ಕ್ ಗಳು ಜೀವ ಕಳೆದುಕೊಳ್ಳುತ್ತಿದ್ದವು.
ಜಲಚರಗಳ ಬದುಕಿನ ಅರ್ಧಯಯನದ ಕುರಿತು ಅವುಗಳ ಜೀವ ತೆಗೆಯುವುದು ಅಮಾನುಷ ಎಂದು ಕಡಲ ವಿಜ್ಞಾನಿಗಳೇ ಸಾಕಷ್ಟು ಬಾರಿ ಚರ್ಚಿಸಿದ್ದರು. ಅದೊಂದು ಪೈಶಾಚಿಕ ಕೃತ್ಯ ಎಂದು ಅಭಿಮತ ವ್ಯಕ್ತಪಡಿಸಿದ್ದರು. ಆದರೆ ಈಗ ಆ ಪ್ರಯೋಗಕ್ಕೆ ಇತಿಶ್ರೀ ಹಾಡಲೆಂದು ಇಂಗ್ಲೆಂಡನ ಕಡಲ ವಿಜ್ಞಾನಿಗಳು ಸೋನೋಗ್ರಾಮ್ ಪರೀಕ್ಷೆ ನಡೆಸಿ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಈ ಪ್ರಯೋಗದಿಂದ ಶಾರ್ಕ್ ಗೆ ಯಾವುದೇ ರೀತಿಯಿಂದಲೂ ಸಮಸ್ಯೆಯಾಗದು ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಹ್ಯಾರ್ಮ ಭಿಪ್ರಾಯಿಸಿದ್ದಾರೆ.
ಮನುಷ್ಯರು ಗರ್ಭ ಧರಿಸಿದ್ದಾರೋ ಇಲ್ಲವೋ ಎಂದು ನೋಡಲು ಅವರನ್ನು ಸಾಯಿಸುವುದಿಲ್ಲವಲ್ಲ ಎಂದಾದ ಮೇಲೆ, ಮೋಕ ಪ್ರಾಣಿಗಳನ್ನು ಸಾಯಿಸುವುದು ಸರಿಯಲ್ಲ. ಅವುಗಳಿಗೂ ಮನುಷ್ಯರ ಹಾಗೆ ಸಂಸಾರ, ಸ್ನೇಹ, ಸಂಬಂಧವಿರುತ್ತದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಹೊಸ ಪ್ರಯೋಗ ನಡೆಸಲು ಮುಂದಾಗಿ, ಅದರಲ್ಲಿ ಯಶ ಕಂಡಿದ್ದೇವೆ. ಈ ಪ್ರಯೋಗ ಇನ್ನುಳಿದ ಪ್ರಾಣಿಗಳ, ಜಲಚರಗಳ ಮೇಲೂ ಮುಂದುವರಿಯಲಿದೆ ಎಂದ ಅವರು, ಈ ಪರೀಕ್ಷೆಗಳನ್ನು ನಿಯಂತ್ರಿಸಲು ಧ್ವನಿ ತರಂಗಗಳು ಹಾಗೂ ಸ್ಯಾಟಲೈಟ್ ಟ್ಯಾಗ್ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಶಾರ್ಕ್ ಮೇಲೆ ನಡೆದ ಆಪರೇಷನ್ ವಿಡಿಯೊ ಕೂಡ ವಿಜ್ಞಾನಿ ತಂಡ ಮಾಡಿದ್ದು, ಹೊಟ್ಟೆಯೊಳಗೆ ಮರಿ ಶಾರ್ಕ್ ಗಳು ಯಾವ ರೀತಿಯಲ್ಲಿ ಚಲಿಸುತ್ತಿವೆ ಎಂಬುದನ್ನು ಅದರಲ್ಲಿ ಸೂಕ್ಷ್ಮವಾಗಿ ನೋಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.