Select Your Language

Notifications

webdunia
webdunia
webdunia
webdunia

ಕಾರಿನೊಳಗೆ ಮೋದಿ ಜತೆಗಿನ ಸಂಭಾಷಣೆ ಬಗ್ಗೆ ಮೌನ ಮುರಿದ ರಷ್ಯಾ ಅಧ್ಯಕ್ಷ ಪುಟಿನ್

ಪ್ರಧಾನಿ ನರೇಂದ್ರ ಮೋದಿ

Sampriya

ಚೀನಾ , ಗುರುವಾರ, 4 ಸೆಪ್ಟಂಬರ್ 2025 (15:50 IST)
ಚೀನಾ: ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯ ನಂತರ ಚೀನಾದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು ಭಾರೀ ಸದ್ದು ಮಾಡಿತ್ತು.

ಇವರಿಬ್ಬರು ಒಟ್ಟಿಗೆ 50 ನಿಮಿಷಗಳ ಕಾಲ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರು ಯಾವ ವಿಚಾರ ಬಗ್ಗೆ ಮಾತನಾಡಿದ್ದರು ಎಂಬುದನ್ನು ಹೇಳಿರಲಿಲ್ಲ.

ಇದೀಗ ಈ ಸಂಬಂಧ ಪುಟಿನ್ ಅವರು ‌ಪ್ರತಿಕ್ರಿಯಿಸಿದ್ದಾರೆ.  ಕಾರಿನಲ್ಲಿ ಪ್ರಯಾಣ ಬೆಳೆಸಿದಾಗ ಯುಎಸ್ ಮಾತುಕತೆಯ ಬಗ್ಗೆ ಸಂಭಾಷಣೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. 

ಚೀನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ ಅವರು, "ಇದು ರಹಸ್ಯವಲ್ಲ, ನಾವು ಅಲಾಸ್ಕಾದಲ್ಲಿ ಏನು ಮಾತನಾಡಿದ್ದೇವೆ ಎಂಬುದನ್ನು ನಾನು ಅವರಿಗೆ ಹೇಳಿದೆ."


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಯೋಜಿತ: ಬೆಂಗಳೂರಿನ 5 ಅಪಾರ್ಟ್ಮೆಂಟ್ಗಳಿಂದ ನಿತ್ಯ 3 ಲಕ್ಷ ಲೀಟರ್ ನೀರು ಮರುಬಳಕೆ