ನವದೆಹಲಿ: ಅಮೆರಿಕಾದ ಸುಂಕ ಹೇರಿಕೆ ವಿರುದ್ಧ ಸಿಡಿದೆದ್ದಿರುವ ಭಾರತ, ರಷ್ಯಾ ಈಗ ಮತ್ತಷ್ಟು ಕ್ಲೋಸ್ ಆಗಿವೆ. ಇದರ ಬೆನ್ನಲ್ಲೇ ಈಗ ಭಾರತಕ್ಕೆ ತೈಲ ಖರೀದಿಯಲ್ಲಿ ಬಿಗ್ ಆಫರ್ ನೀಡಿದ್ದು, ಬೆಲೆಯಲ್ಲೂ ರಿಯಾಯಿತಿ ನೀಡಿದೆ.
ಶಾಂಘೈ ಶೃಂಗ ಸಭೆಗೆಂದು ಚೀನಾಗೆ ಹೋಗಿದ್ದಾಗ ಭಾರತ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾರಿನಲ್ಲೇ 50 ನಿಮಿಷ ಗುಪ್ತ ಮಾತುಕತೆ ನಡೆಸಿದ್ದರು. ಶೃಂಗ ಸಭೆಯಲ್ಲಿ ಗಳಸ್ಯ-ಕಂಠಸ್ಯ ಎನ್ನುವಷ್ಟು ಹತ್ತಿರವಿದ್ದ ಪುಟಿನ್-ಮೋದಿ ಅಮೆರಿಕಾ ಹೊಟ್ಟೆ ಉರಿಸಿದ್ದರು.
ಇದೂ ಸಾಲದೆಂಬಂತೆ ಈಗ ರಷ್ಯಾ ಭಾರಕ್ಕೆ ಮತ್ತೊಂದು ಬಿಗ್ ಆಫರ್ ನೀಡಿದೆ. ಅಮೆರಿಕಾ ಏನೇ ಕಿರಿಕ್ ಮಾಡಿದರೂ ರಷ್ಯಾದಿಂದ ತೈಲ ಖರೀದಿಸುವುದನ್ನು ಮಾತ್ರ ಭಾರತ ನಿಲ್ಲಿಸಿಲ್ಲ. ಇದೇ ಕಾರಣಕ್ಕೆ ಈಗ ಭಾರತಕ್ಕೆ ರಷ್ಯಾ 4 ಡಾಲರ್ ನಷ್ಟು ರಿಯಾಯಿತಿ ದರ ನೀಡಲು ಮುಂದಾಗಿದೆ.
ಮಾರುಕಟ್ಟೆ ಬೆಲೆಯಲ್ಲಿ ಮತ್ತೆ 4 ಡಾಲರ್ ರಿಯಾಯಿತಿಯಲ್ಲಿ ಭಾರತಕ್ಕೆ ತೈಲ ಮಾರಾಟ ಮಾಡಲು ರಷ್ಯಾ ಮುಂದಾಗಿದೆ. ಈ ಮೊದಲು ರಷ್ಯಾ ಭಾರತಕ್ಕೆ 1 ಡಾಲರ್ ನಷ್ಟು ರಿಯಾಯಿತಿ ನೀಡಿತ್ತು. ಅಮೆರಿಕಾ ಸುಂಕ ಏರಿಕೆ ಮಾಡಿದ ಬಳಿಕ ರಿಯಾಯಿತಿ ದರ 2.5 ಡಾಲರ್ ಗೆ ಏರಿಕೆ ಮಾಡಿತ್ತು. ಇದೀಗ 4 ಡಾಲರ್ ಗೆ ಹೆಚ್ಚಿಸಲು ಮುಂದಾಗಿದೆ.