ವಾಷಿಂಗ್ಟನ್ : ಉಕ್ರೇನ್, ರಷ್ಯಾ ನಡುವೆ ಯುದ್ಧದಲ್ಲಿ ನಿನ್ನೆ ಅಣುಬಾಂಬ್ನ ಚರ್ಚೆ ಆಗಿತ್ತು.
ಈ ಬೆನ್ನಲ್ಲೇ, ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಕ್ಲಸ್ಟರ್ ಮತ್ತು ವ್ಯಾಕ್ಯೂಮ್ ಬಾಂಬ್ ಪ್ರಯೋಗಿಸಿದೆ ಎಂದು ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಗಂಭೀರ ಆರೋಪ ಮಾಡಿದ್ದಾರೆ.
ವ್ಯಾಕ್ಯೂಮ್ ಬಾಂಬ್ ಸಾಮಾನ್ಯವಾಗಿ 7,100 ಕೆ.ಜಿ ತೂಕ ಇದ್ದು, 300 ಮೀ.ವರೆಗೂ ಭಾರಿ ಹಾನಿ ಉಂಟು ಮಾಡುವ ಸಾಮರ್ಥ್ಯವಿದೆ. ಪರಮಾಣು ರಹಿತ ಅತ್ಯಾಧುನಿಕ ಬಾಂಬ್ ಎಂದು ವ್ಯಾಕ್ಯೂಮ್ ಬಾಂಬ್ನ್ನು ಕರೆಯಲಾಗುತ್ತದೆ.
2007ರಲ್ಲಿ ವ್ಯಾಕ್ಯೂಮ್ ಬಾಂಬ್ ಅಭಿವೃದ್ಧಿ ಮಾಡಿದ್ದ ರಷ್ಯಾ. 2016ರಲ್ಲಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ. ವಿಶ್ವದಲ್ಲೇ ಮೊದಲಿಗೆ ಅಮೆರಿಕ ಈ ಬಾಂಬ್ ತಯಾರಿಸಿತ್ತು.