Select Your Language

Notifications

webdunia
webdunia
webdunia
webdunia

ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ

ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ
ಲಂಡನ್ , ಶನಿವಾರ, 29 ಏಪ್ರಿಲ್ 2023 (12:40 IST)
ಲಂಡನ್ : ದಿಢೀರ್ ಬೆಳವಣಿಗೆಯೊಂದರಲ್ಲಿ ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ ನೀಡಿದ್ದಾರೆ.

ಇಂಗ್ಲೆಂಡ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ 8 ಲಕ್ಷ ಪೌಂಡ್ (ಅಂದಾಜು 8.15 ಕೋಟಿ ರೂ.) ಸಾಲದ ಗ್ಯಾರಂಟಿ ನೀಡಲು ರಿಚರ್ಡ್ ಶಾರ್ಪ್ ನೆರವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು

ಕೆಲ ತಿಂಗಳ ಹಿಂದೆ ಸಂಡೆ ಟೈಮ್ಸ್ ರಿಚರ್ಡ್ ಶಾರ್ಪ್ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಬೋರಿಸ್ ಜಾನ್ಸನ್ ಮತ್ತು ರಿಚರ್ಡ್ ಶಾರ್ಪ್ ವಿರುದ್ಧ ಟೀಕೆ ವ್ಯಕ್ತವಾಗಿತ್ತು. 

ಹೊಸ ಮುಖ್ಯಸ್ಥರ ಆಯ್ಕೆಯಾಗುವವರೆಗೂ ರಿಚರ್ಡ್ ಶಾರ್ಪ್ ಮುಖ್ಯಸ್ಥರಾಗಿಯೇ ಮುಂದುವರಿಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಮ್ ಇದ್ದರೆ ಮೀಸಲಾತಿಯನ್ನು ಮುಟ್ಟಿ ನೋಡಿ : ಬಸವರಾಜ ಬೊಮ್ಮಾಯಿ