ಲಂಡನ್ : ತೀವ್ರ ಒತ್ತಡದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದಾರೆ.
ಹಗರಣಗಳು, ಸ್ವಪಕ್ಷದ ನಾಯಕರ ಭಾರಿ ವಿರೋಧದಿಂದ ಬೊರೀಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಮುಂದಿನ ಪ್ರಧಾನಿ ಆಯ್ಕೆಯಾಗುವ ವರೆಗೆ ಬೊರಿಸ್ ಜಾನ್ಸನ್ ಹಂಗಾಮಿ ಪ್ರದಾನಿಯಾಗಿ ಮುಂದುವರಿಯಲಿದ್ದಾರೆ.
ಅಕ್ಟೋಬರ್ 2022ರಲ್ಲಿ ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಅಲ್ಲೀವರೆಗೆ ಬೋರಿಸ್ ಪ್ರದಾನಿಯಾಗಿ ಮುಂದುವರಿಯಲಿದ್ದಾರೆ.
ಕನ್ಸರ್ವೇಟೀವ್ ಪಕ್ಷದ ನಾಯಕ ಸ್ಥಾನದಿಂದ ಬೊರಿಸ್ ಜಾನ್ಸನ್ ಕೆಳಗಿಳಿದಿದ್ದಾರೆ. ಮುಂದಿನ ಪ್ರಧಾನಿ ಆಯ್ಕೆವರೆಗೂ ಸ್ಥಾನದಲ್ಲಿ ಮುಂದುವರಿಯುವುದಾಗಿ ಬೊರಿಸ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಬೊರೀಸ್ ಹೇಳಿದ್ದಾರೆ.
ಪ್ರಧಾನಿಯಾಗಿ ನಾನು ಮಾಡಿದ ಕಾರ್ಯಗಳು ನನಗೆ ತೃಪ್ತಿ ತಂದಿದೆ. ಸರ್ಕಾರದ ಸಾಧನೆಗಳಿಗೆ ಹೆಮ್ಮೆಯಾಗುತ್ತಿದೆ. ನನ್ನ ರಾಜೀನಾಮೆಯಿಂದ ಕೆಲವರು ನಿರಾಶೆಗೊಳ್ಳುತ್ತಾರೆ. ಹಲವರು ನಿರಾಶೆಗೊಂಡಿದ್ದಾರೆ ಎಂದು ತಿಳಿದಿದೆ.