ವಾಷಿಂಗ್ಟನ್ : ಮಗು ಜೋರಾಗಿ ಅಳುವಾಗ ಅದು ಯಾಕೆ ಅಳುತ್ತಿದೆ ಎಂಬ ವಿಚಾರ ತಿಳಿಯದೆ ಕಂಗಲಾಗುವ ಪಾಲಕರಿಗೆ ಇದೀಗ ಸಂಶೋಧಕರ ತಂಡವೊಂದು ಸಿಹಿಸುದ್ದಿಯನ್ನು ನೀಡಿದೆ.
ಹೌದು. ಸಂಶೋಧಕರ ತಂಡವೊಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ವ್ಯವಸ್ಥೆಯನ್ನು ಕಂಡುಹಿಡಿದಿದ್ದು, ಅದರ ಮೂಲಕ ಮಗು ಅಳುವುದಕ್ಕೆ ನಿಜವಾದ ಕಾರಣ ತಿಳಿದುಕೊಳ್ಳಲು ಮುಂದಾಗಿದ್ದಾರೆ. ಅಂದರೆ ಮಗು ಸಾಮಾನ್ಯವಾಗಿ ಅಳುತ್ತಿದೆಯೇ ಅಥವಾ ಗಂಭೀರ ಸಮಸ್ಯೆಯಾಗಿ ಅಳುತ್ತಿದೆಯೇ ಎಂಬುದರ ವ್ಯತ್ಯಾಸವನ್ನು ಈ ನೂತನ ವ್ಯವಸ್ಥೆ ಹೇಳಲಿದೆಯಂತೆ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟಿಸಲಾಗಿದೆ.
ಈ ವ್ಯವಸ್ಥೆಯಲ್ಲಿ ವಿಶೇಷ ಅಲ್ಗೋರಿತಮ್ ವಿನ್ಯಾಸಗೊಳಿಸಲಾಗಿದೆ. ಸ್ಪೀಚ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಮಗುವಿನ ಅಳುವ ಭಂಗಿಯನ್ನು ಕಂಡುಕೊಳ್ಳಲಾಗಿದೆ. ಹಾಗೇ ಇದರಲ್ಲಿ ಹೊಸ ಕ್ರೈ ಲ್ಯಾಂಗ್ವೇಜ್ ರೆಕಗ್ನಿಷನ್ ಅಲ್ಗೋರಿಯಮ್ ವಿನ್ಯಾಸ ಮಾಡಲಾಗಿದ್ದು, ಇದು ಮಗುವಿನ ಅಳು ಸಾಮಾನ್ಯವೇ? ಅಥವಾ ಗಂಭೀರವೇ? ಎಂಬುದನ್ನು ಇದು ತಿಳಿಸುತ್ತದೆಯಂತೆ.