ವಾಷಿಂಗ್ಟನ್ : ಕೆಲವರು ತೂಕ ಇಳಿಸಲು ವ್ಯಾಯಾಮ, ಡಯಟ್, ವಾಕಿಂಗ್ ಎಂದು ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಅಮೇರಿಕಾದ ವ್ಯಕ್ತಿಯೊಬ್ಬ 46 ದಿನಗಳ ಕಾಲ ಕೇವಲ ಬಿಯರ್ ಕುಡಿದು ತೂಕ ಇಳಿಸಿಕೊಂಡಿದ್ದಾನಂತೆ.
ಹೌದು. 1600 ನೇ ಶತಮಾನದಿಂದ ಪುರಾತನ ಕ್ಯಾಥೋಲಿಕ್ ಸಂಪ್ರದಾಯದಂತೆ ಸನ್ಯಾಸಿಗಳು ಬಿಯರ್ ಡಯಟ್ ಅನ್ನು ಆರಂಭಿಸಿದ್ದರು. ನೀರಿನ ಬದಲಾಗಿ ಪ್ರಬಲವಾದ ಪೌಷ್ಠಿಕಾಂಶ ಹೊಂದಿದ ಬಿಯರ್ ಅನ್ನು ಸೇವಿಸುತ್ತಿದ್ದರು ಎಂದು ತಿಳಿದಬಂದಿದೆ.
ಅದರಂತೆ ಅಮೆರಿಕದ ಡೆಲ್ ಹಾಲ್ ಎಂಬ ವ್ಯಕ್ತಿಯೊಬ್ಬ ಧಾರ್ಮಿಕ ಆಚರಣೆಯೊಂದಕ್ಕಾಗಿ 46 ದಿನಗಳ ಕಾಲ ಉಪವಾಸವಿದ್ದು, ಆ ವೇಳೆ ಬಿಯರ್ ಮಾತ್ರ ಸೇವಿಸಿದ್ದಾನಂತೆ. ಇದರ ಪರಿಣಾಮ ಆತ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದಾನಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ