Select Your Language

Notifications

webdunia
webdunia
webdunia
webdunia

Pakistan: ನೀವೇನೂ ಇಲ್ಲಿ ಬರೋದು ಬೇಡ: ತನ್ನ ಪ್ರಜೆಗಳಿಗೆ ತಾನೇ ಬಾಗಿಲು ತೆರೆಯದ ಪಾಕಿಸ್ತಾನ

wagha boarder

Krishnaveni K

ನವದೆಹಲಿ , ಗುರುವಾರ, 1 ಮೇ 2025 (20:56 IST)
Photo Credit: X
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ತನ್ನ ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡಿದ್ದು ತಕ್ಷಣವೇ ದೇಶ ಬಿಡುವಂತೆ ತಾಕೀತು ಮಾಡಿತ್ತು. ಆದರೆ ಅತ್ತ ಪಾಕಿಸ್ತಾನ ತನ್ನ ಪ್ರಜೆಗಳಿಗೇ ನೀವೇನೂ ಇಲ್ಲಿ ಬರೋದು ಬೇಡ ಎಂಬಂತೆ ಬಾಗಿಲು ಹಾಕಿ ಕೂತಿದೆ.

ಭಾರತದಲ್ಲಿರುವ ಎಷ್ಟೋ ಪಾಕಿಸ್ತಾನಿ ನಾಗರಿಕರು ಗಂಟು ಮೂಟೆ ಕಟ್ಟಿಕೊಂಡು ತಮ್ಮ ದೇಶಕ್ಕೆ ತೆರಳಲು ವಾಘಾ-ಅಟ್ಟಾರಿ ಗಡಿ ಬಳಿ ಬಂದಿದ್ದಾರೆ. ಆದರೆ ಭಾರತದಿಂದ ಬಂದಿರುವ ತನ್ನ ಪ್ರಜೆಗಳನ್ನೇ ಪಾಕಿಸ್ತಾನ ಒಳಗೆ ಬಿಟ್ಟುಕೊಳ್ಳುತ್ತಿಲ್ಲ.

ಹೀಗಾಗಿ ಈಗ ಭಾರತ ಬಿಟ್ಟ ಪಾಕಿಸ್ತಾನ ಪ್ರಜೆಗಳು ಅಟ್ಟಾರಿ ಗಡಿಯಲ್ಲೇ ಸಿಲುಕಿಕೊಂಡಿದ್ದಾರೆ. ತಮ್ಮ ಬ್ಯಾಗ್ ಗಳ ಸಮೇತ ತಮ್ಮ ದೇಶದ ಬಾಗಿಲು ತೆರೆಯುತ್ತಾ ಎಂದು ಕಾದು ಕುಳಿತಿದ್ದಾರೆ.

ಗಡಿ ಬಾಗಿಲು ತೆರೆಯುತ್ತದೆ ಎಂದು ಬೆಳ್ಳಂ ಬೆಳಿಗ್ಗೆಯಿಂದಲೇ ಕಾದು ಕುಳಿತಿದ್ದ ಪಾಕ್ ನಾಗರಿಕರಿಗೆ ನಿರಾಸೆಯಾಗಿದೆ. ಮಧ್ಯಾಹ್ನವಾದರೂ ತೆರೆಯದೇ ಇದ್ದಾಗ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಭಾರತದಿಂದ ಬಂದಿರುವವರನ್ನು ಸ್ವಿಕರಿಸಬಾರದು ಎಂದು ಪಾಕ್ ಅಧಿಕಾರಿಗಳೇ ಸೂಚಿಸಿದ್ದಾರಂತೆ. ಹೀಗಾಗಿ ಈಗ ಭಾರತದಿಂದ ತೆರಳಿರುವ ಪಾಕ್ ನಾಗರಿಕರ ಸ್ಥಿತಿ ಅತಂತ್ರವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌