ನವದೆಹಲಿ: ಭಾರತೀಯ ಸೇನೆಯ ದಾಳಿಗೆ ಬೆಚ್ಚಿ ಪಾಕಿಸ್ತಾನ ಅಂದು ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಅವರನ್ನು ಬಿಡುಗಡೆ ಮಾಡಿತ್ತು ಎಂದು ಪಾಕ್ ಸಂಸತ್ತಿನಲ್ಲಿ ಪಾಕ್ ನ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಅಯಾಝ್ ಸಿದ್ದಿಕಿ ಒಪ್ಪಿಕೊಂಡಿದ್ದಾರೆ.
ಆವತ್ತು ಅಭಿನಂದನ್ ಬಿಡುಗಡೆ ಮಾಡುವಾಗ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಕೈಗಳು ಕಂಪಿಸುತ್ತಿದ್ದವು ಎಂದು ಸಿದ್ದಿಕಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಪಾಕ್ ಮುಖವಾಡ ಜಗತ್ತಿನೆದುರು ಬೆತ್ತಲಾಗಿದೆ.
ಅಭಿನಂದನ್ ಬಂಧನವಾದಾಗ ಪಾಕ್ ವಿದೇಶಾಂಗ ಸಚಿವ ಶಾ ಖುರೇಷಿ ಪ್ರತಿಪಕ್ಷಗಳನ್ನೂ ಸೇರಿದಂತೆ ಮೀಟಿಂಗ್ ಕರೆದಿದ್ದರು. ಅಭಿನಂದನ್ ಬಿಡುಗಡೆ ಮಾಡದೇ ಇದ್ರೆ ರಾತ್ರಿ 9 ಗಂಟೆಗೆ ಭಾರತ ಪಕ್ಕಾ ದಾಳಿ ಮಾಡುತ್ತೆ ಎಂದು ಅವರು ಭಯದಿಂದಲೇ ಹೇಳಿದ್ದರು. ಇದನ್ನು ಕೇಳಿ ಸೇನಾ ಮುಖ್ಯಸ್ಥರೂ ಭಯದಿಂದ ಕಂಪಿಸಿದ್ದರು. ಆ ನಂತರ ಭಾರತದ ಪೈಲಟನ್ನು ಬಿಡುಗಡೆ ಮಾಡುವುದೇ ಉತ್ತಮ ಎಂದು ನಿರ್ಧರಿಸಲಾಯಿತು ಎಂದಿದ್ದಾರೆ.