ನವದೆಹಲಿ: ಭಾರತದ ರಾಜಧಾನಿ ದೆಹಲಿ ಮತ್ತು ಪಂಜಾಬ್ ಗಡಿ ಸಮೀಪ ಸುಮಾರು 140 ಅಣ್ವಸ್ತ್ರಗಳನ್ನು ಸಂಗ್ರಹಿಸಲು ಅಡಗುದಾಣಗಳನ್ನು ಪಾಕ್ ನಿರ್ಮಿಸುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ದೆಹಲಿಯಿಂದ 750 ಕಿ.ಮೀ. ದೂರದಲ್ಲಿ ಮತ್ತು ಪಂಜಾಬ್ ನ ಅಮೃತಸರದಿಂದ ಕೇವಲ 350 ಕಿ.ಮೀ. ದೂರದಲ್ಲಿ ಪಾಕ್ ಸುರಂಗ ಕೊರೆದು ಅಣ್ವಸ್ತ್ರಗಳನ್ನು ರಹಸ್ಯವಾಗಿ ಸಂಗ್ರಹಿಸಿಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಲ್ಲದೆ ಈ ಸುರಂಗ ಮಾರ್ಗಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಸುಲಭವಾಗುವಂತೆ ಅಗಲವಾದ ರಸ್ತೆ ನಿರ್ಮಿಸುತ್ತಿದೆ ಎನ್ನಲಾಗಿದೆ. ಪ್ರತೀ ಅಡಗುದಾಣದಲ್ಲಿ 10 ರಿಂದ 12 ಅಣ್ವಸ್ತ್ರಗಳನ್ನು ಸಂರಕ್ಷಿಸಿಡುವ ಸಾಮರ್ಥ್ಯವಿದೆ ಎನ್ನಲಾಗಿದೆ. ಭಾರತದ ವಿರುದ್ಧ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಕ್ ನ ಈ ನಡೆ ನಿಜಕ್ಕೂ ಕಳವಳಕಾರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ