Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೀವ್ : ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ತಟಸ್ಥತೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ ಎಂದು ಹೇಳಿದರು.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ 2 ತಿಂಗಳು ಕಳೆದಿವೆ. ಭಾರತ ಈ ಎರಡು ದೇಶಗಳಲ್ಲಿ ಯವುದಕ್ಕೂ ಬೆಂಬಲ ನೀಡದೇ ತಟಸ್ಥ ನಿಲುವನ್ನು ಪ್ರದರ್ಶಿಸಿದೆ. ಇದರ ನಡುವೆಯೂ ಹಲವು ಬಾರಿ ಉಕ್ರೇನ್ ಹಾಗೂ ರಷ್ಯಾ ದೇಶಗಳಿಗೆ ಯುದ್ಧ ನಿಲ್ಲಿಸುವಂತೆ ಮನವಿಯನ್ನೂ ಮಾಡಿದೆ.
ಯುದ್ಧದ ಬಗ್ಗೆ ತಟಸ್ಥ ನಿಲುವನ್ನು ಹೊಂದಿರುವ ಭಾರತದ ಬಗ್ಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ, ಭಾರತದ ಸಹಾನುಭೂತಿ ಹಾಗೂ ಯುದ್ಧವನ್ನು ನಿಲ್ಲಿಸಬೇಕು ಎಂಬ ನಿಲುವನ್ನು ಪ್ರಶಂಸಿಸುತ್ತೇವೆ. ಆದರೆ ತಟಸ್ಥ ಧೋರಣೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ ಎಂಬುದನ್ನು ನಾನು ತಿಳಿಸಬಯಸುತ್ತೇನೆ ಎಂದರು.