ಲಂಡನ್ : ಭಾರತದಲ್ಲಿ ವಿವಿಧ ಬ್ಯಾಂಕುಗಳಿಗೆ ಕೋಟ್ಯಾಂತರ ರೂ. ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಆಭರಣ ವಿನ್ಯಾಸಕಾರ ನೀರವ್ ಮೋದಿ ಯನ್ನು ಇದೀಗ ಲಂಡನ್ ನಲ್ಲಿ ಬಂಧಿಸಲಾಗಿದೆ.
ಭಾರತದ ಬ್ಯಾಂಕುಗಳಿಂದ ಸುಮಾರು 1.5 ಶತಕೋಟಿ ರೂ. ಪಡೆದು ಅದನ್ನು ಮರುಪಾವತಿ ಮಾಡದೇ ವಂಚಿಸಿ ಪರಾರಿಯಾದ ನೀರವ್ ಮೋದಿ ಲಂಡನ್ ನಲ್ಲಿ ತಲೆಮರಿಸಿಕೊಂಡಿದ್ದಾರೆ ಎಂಬ ವಿಚಾರ ಇತ್ತೀಚೆಗಷ್ಟೆ ತಿಳಿದುಬಂದಿತ್ತು. ಆತನನ್ನು ಗಡೀಪಾರು ಮಾಡುವಂತೆ ಭಾರತ ಗೃಹಸಚಿವಾಲಯಕ್ಕೆ ಕೋರಿಕೆಯನ್ನು ಸಲ್ಲಿಸಿತ್ತು.
ಭಾರತದ ಕೋರಿಕೆಯನ್ನು ಗೃಹಸಚಿವಾಲಯದ ಕಾರ್ಯದರ್ಶಿ ಸಾಜಿದ್ ಜಾವೀದ್ ದೃಢೀಕರಿಸಿದ ನಂತರ ಲಂಡನ್ನ ವೆಸ್ಟ್ಮಿನ್ಸ್ಟರ್ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ